ಲಿಂಗಸುಗೂರು : ಬೀದಿ ವ್ಯಾಪಾರಿಗಳ ಗಣರಾಜ್ಯೋತ್ಸವ ಸಂಭ್ರಮ
ಲಿಂಗಸುಗೂರು : ಕರ್ನಾಟಕ ರಾಜ್ಯ ರಸ್ತೆ ಬೀದಿ ವ್ಯಾಪಾರಿಗಳ ಮಹಾಮಂಡಲದ ಪದಾಧಿಕಾರಿಗಳು ಮಂಗಳವಾರ ದೇಶದ 72ನೇ ಸ್ವತಂತ್ರ ದಿನಾಚರಣೆಯನ್ನು ರಾಷ್ಟ್ರಪಿತ ಮಹಾತ್ಮಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಾಜಸೇವಕ ಮೊಹಮ್ಮದ್ ಹಾಜಿ ಬಾಬಾ ಕರಡಕಲ್ ಮಾತನಾಡಿ, ಕಾಯಕ ಶ್ರೇಷ್ಠ ಯಾವುದೇ ಕೆಲಸ ಕನಿಷ್ಠ ಗರಿಷ್ಠ ಎಂದು ಇರುವುದಿಲ್ಲ. ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವ ಬೀದಿಬದಿ ವ್ಯಾಪಾರಿಗಳು ಯಾವುದೇ ಕೀಳರಿಮೆಗೆ ಒಳಗಾಗದೆ ಸ್ವಾಭಿಮಾನದಿಂದ ಬದುಕನ್ನು ಸಾಗಿಸಬೇಕು. ಬೀದಿಬದಿ ಬಡ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಸಂಘ ಕೆಲಸ ನಿರ್ವಹಿಸಬೇಕು. ಸರಕಾರದ ಯೋಜನೆಗಳನ್ನು ಅರ್ಹ ಬಡ ವ್ಯಾಪಾರಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.
ಸಂಘದ ಅಧ್ಯಕ್ಷ ಮಹಬೂಬಪಾಷಾ, ಕಾರ್ಯದರ್ಶಿ ಹುಸೇನ್ ಸಾಬ್ ಗಾದಿ, ಉಪಾಧ್ಯಕ್ಷ ಜಗನ್ನಾಥ್ ಜಾದವ್ ಜಾದವ್, ಮಹಾಂತೇಶ, ಶರಣಪ್ಪ, ಖಾಜಾಹುಸೇನ್, ಮಹಾಂತೇಶ ಹೂಗಾರ, ಬಸವರಾಜ್, ಕೇಶವ ರಾಥೋಡ್, ಮಾದೇಶ ಸರ್ಜಾಪುರ, ಪಂಪಣ್ಣ ಹೂಗಾರ್ ಸೇರಿದಂತೆ ಇತರರು ಇದ್ದರು.

