ಬಿಜೆಪಿ ಕಾರ್ಯಕಾರಿಣಿ : ಪಕ್ಷ ಬಲವರ್ಧನೆಗೆ ಒತ್ತು ನೀಡಲು ಗೋಪಶೆಟ್ಟಿ ಕರೆ
ಲಿಂಗಸುಗೂರು : ಬಿಜೆಪಿ ಪಕ್ಷವನ್ನು ಬೂತ್‍ಮಟ್ಟದಲ್ಲಿ ಬಲವರ್ಧನೆ ಮಾಡಲು ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಶ್ರಮಿಸಲು ಮುಂದಾಗಬೇಕೆಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾದ್ಯಕ್ಷೆ ವಿಜಯರಾಜೇಶ್ವರಿ ಗೋಪಶೆಟ್ಟಿ ಕರೆ ನೀಡಿದರು.
ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ನಡೆದ ಮಹಿಳಾ ಮೋರ್ಚಾ
ಕಾರ್ಯಕಾರಿಣಿ ಸಭೆಯಲ್ಲಿ ಫಾಲ್ಗೊಂಡು ಮಾತನಾಡಿದ ಅವರು, ಬಡವರು,ಕಾರ್ಮಿಕರು, ಮಹಿಳೆಯರು, ಮಕ್ಕಳು ಸೇರಿ ಸಮಾಜದ ಒಳಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಂದಿರುವ ಯೋಜನೆಗಳ ಬಗ್ಗೆ ಗ್ರಾಮೀಣ ಪ್ರದೇಶಕ್ಕೆ ತೆರಳಿ ಜನಜಾಗೃತಿ ಮೂಡಿಸುವ ಕೆಲಗಳಾಗಬೇಕೆಂದು ಹೇಳಿದರು.
ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಹಟ್ಟಿಚಿನ್ನದ ಗಣಿ
ಅದ್ಯಕ್ಷ ಮಾನಪ್ಪ ವಜ್ಜಲ್‍ರ ನೇತೃತ್ವದಲ್ಲಿ ಸಂಘಟಿತವಾಗುತ್ತಿದೆ.ಇದರಲ್ಲಿ ಮಹಿಳಾ ಮೋರ್ಚಾದ ಪಾತ್ರವೂ ಬಹುಮುಖ್ಯವಾಗಿದೆ.ಸ್ವಯಂಪ್ರೇರಿತರಾಗಿ ಮಹಿಳಾ ಕಾರ್ಯಕರ್ತೆಯರು ಪಕ್ಷ ಸಂಘಟನೆಗೆ
ಮುಂದೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ. ಪಕ್ಕದ ಮಸ್ಕಿಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಮಹಿಳಾ ಮೋರ್ಚಾದ ವತಿಯಿಂದ ಪ್ರಚಾರಾರ್ಥ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ಸಜ್ಜಾಗಬೇಕೆಂದು ತಾಲೂಕು ಅದ್ಯಕ್ಷೆ
ಜಯಶ್ರೀ ಸಕ್ರಿ ಮಾತನಾಡಿದರು.
ಮಂಡಲ ಕಾರ್ಯದರ್ಶಿ ಜ್ಯೋತಿ ಸುಂಕದ್ ಪ್ರಾಸ್ತಾವಿಕವಾಗಿ
ಮಾತನಾಡಿದರು. ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ ಪ್ರಾರ್ಥನೆ ಮಾಡಿ ಕಾರ್ಯಕ್ರಮ ನಿರ್ವಹಿಸಿದರು.
ಮೋರ್ಚಾದ ಉಸ್ತುವಾರಿ ಸೀತಾ ನಾಯಕ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶೋಭಾ ಕಾಟವಾ, ಸುಷ್ಮಾ, ಸ್ಮೀತಾ ಸೇರಿ ಇತರರು ಸಭೆಯಲ್ಲಿ ಇದ್ದರು.

