ಬೆಂಗಳೂರು

ಭದ್ರಾವತಿ ನಗರಸಭೆ ಚುನಾವಣೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 11 ವಾರ್ಡಗಳಗ ಸ್ಪರ್ಧಿಸಲು ನಿರ್ಧಾರ

ಭದ್ರಾವತಿ: ನಗರಸಭೆ ಚುನಾವಣೆಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ( ಡಬ್ಲ್ಯೂ ಪಿ ಐ) ಪಕ್ಷದಿಂದ ನಗರದ 35 ವಾರ್ಡಗಳ ಪೈಕಿ 11 ವಾರ್ಡಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಲಾಯಿತು.

ನಗರದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಛೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಅಡ್ವಕೇಟ್ ತಾಹೀರ್ ಹುಸೇನ್ ಅವರ ಅದ್ಯಕ್ಷತೆಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಲಾಯಿತು .

ಸ್ಪರ್ಧಿಸುವ ವಾರ್ಡಗಳು: 3,5,7,8,9,11,17,18,21,24,33,

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ಮಾತನಾಡಿದರು, ಮೌಲಿಕ ರಾಜಕಾರಣಕ್ಕೆ ಮಾದರಿಯಾಗಿ ಸೇವೆಯ ಮೂಲಕ ಡಬ್ಲುಪಿಐ ಕೆಲಸ ಮಾಡುತ್ತಿದೆ. ಹಲವಾರು ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿಯಲ್ಲಿ ನಮ್ಮ ಸದಸ್ಯರಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲೂ ಸಹ ನಮ್ಮ ಪಕ್ಷ ಸ್ಪರ್ಧೆ ಮಾಡುವುದು.ಮೌಲ್ಯಾಧಾರಿತ ರಾಜಕಾರಣದ ಅವಶ್ಯಕತೆ ಇದೆ. ಜನತೆ ನೈತಿಕ ರಾಜಕಾರಣವನ್ನು ಬೆಂಬಲಿಸಬೇಕು ಎಂದು ವೆಲ್ಪರ್ ಪಾರ್ಟಿಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಅಡ್ವಕೇಟ್ ತಾಹಿರ್ ಹುಸೇನ್ ಹೇಳಿದರು.

ಈ ಸಂದರ್ಭದಲ್ಲಿ: ರಾಜ್ಯ ಮಾಧ್ಯಮ ಕಾರ್ಯದರ್ಶಿ ಜಾಗಿರ್ದಾರ್, ಜಿಲ್ಲಾಧ್ಯಕ್ಷರಾದ ಮುಝಮ್ಮಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀಶಾನ್, ಭದ್ರಾವತಿ ತಾಲೂಕ ಅಧ್ಯಕ್ಷರು ಅಬ್ದುಲ್ ಹಾಗೂ ಸಂಭಾವ್ಯ ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.


Leave a Reply

Your email address will not be published. Required fields are marked *

error: Content is protected !!