ಲಿಂಗಸುಗೂರು ಪ್ರೀಮಿಯರ್ ಲೀಗ್ ಉದ್ಘಾಟನೆ
ಲಿಂಗಸುಗೂರು : ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲಿಂಗಸುಗೂರು ಪ್ರೀಮಿಯರ್ ಲೀಗ್ (ಎಲ್.ಪಿ.ಎಲ್.) ಪಂದ್ಯಾವಳಿಯ ಐದನೇ ಆವೃತ್ತಿಯನ್ನು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ. ವಜ್ಜಲ್ ಉದ್ಘಾಟನೆ ಮಾಡಿದರು.

ಕ್ರೀಡಾ ಪಟುಗಳಿಗೆ ಕ್ರೀಡೆಗೆ ಗೌರವಿಸುತ್ತಾ ಕ್ರೀಡಾ ಸ್ವೂರ್ತಿಯಿಂದ ಆಡಿ ಕ್ರೀಡೆಯನ್ನ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು. ಈ ಹಿಂದೆ ಶಾಸಕರಾಗಿದ್ದ ಸಮಯದಲ್ಲಿ ಸುಮಾರು 1 ಕೋಟಿ ರೂಪಾಯಿ ಅನುದಾನ ಮತ್ತು ಸ್ಥಳವನ್ನು ನೀಡಿ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ್ದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಭೋವಿ, ಉಪಾದ್ಯಕ್ಷ ಮಹ್ಮದ್ ರಫಿ, ಸದಸ್ಯ ರೌಫ್ ಗ್ಯಾರಂಟಿ, ಮುದಕಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ, ಮುಖಂಡರಾದ ಗುರಿ ಮಲ್ಲನಗೌಡ, ಶರಣಬಸವ ಮೇಟಿ, ಭೀಮಣ್ಣ ಹಿರೇಮನಿ, ಚನ್ನಬಸವ ಹಿರೇಮಠ ಸೇರಿ ಹಲವರು ಭಾಗವಹಿಸಿದ್ದರು.

