ಲಿಂಗಸುಗೂರು : ಭಾಜಪ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ
ಲಿಂಗಸುಗೂರು : ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಭಾಜಪ ಮಂಡಲ ಅದ್ಯಕ್ಷ ವೀರನಗೌಡ ಲೆಕ್ಕಿಹಾಳ, ಯುವ ಘಟಕದ ಅದ್ಯಕ್ಷ ಈಶ್ವರ ವಜ್ಜಲ್ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಮುಖಂಡರಾದ ಡಾ.ಶಿವಬಸಪ್ಪ, ಗಿರಿಮಲ್ಲನಗೌಡ, ಜಗನ್ನಾಥ ಕುಲಕರ್ಣಿ, ಗೋವಿಂದ ನಾಯಕ, ಹುಲ್ಲೇಶ ಸಾಹುಕಾರ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ ಕಾಟವಾ, ಪ್ರಧಾನ ಕಾರ್ಯದರ್ಶಿ ಸ್ಮೀತಾ ಅಂಗಡಿ, ಮಂಡಲ ಕಾರ್ಯದರ್ಶಿ ಜ್ಯೋತಿ ಸುಂಕದ್, ನೀಲಮ್ಮ, ಲಕ್ಷ್ಮಿ ಸೇರಿ ಇತರರು ಇದ್ದರು.

