ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿ ಸ್ಥಾಪನೆಗೆ ಒತ್ತಾಯ
ಲಿಂಗಸುಗೂರು : ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಗುರುತಿನ ಚೀಟಿ ನೀಡುವ ಜೊತೆಗೆ ಕಲಾವಿದರ ನೆರವಿಗೆ ಧಾವಿಸುವ ಜೊತೆಗೆ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಅಕಡೆಮಿಯನ್ನು ಸ್ಥಾಪನೆ ಮಾಡಬೇಕೆಂದು ಕ.ಕ. ಕಲಾವಿದರ ಒಕ್ಕೂಟದ ಕೇಂದ್ರ ಸಮಿತಿ ಅದ್ಯಕ್ಷ ವಿಜಯಕುಮಾರ ಸೋನಾರ್ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ರಂಗಭೂಮಿ, ಜನಪದ, ಸಂಗೀತ, ನೃತ್ಯ, ಬಯಲಾಟ, ಬುಡಕಟ್ಟು ಜನಾಂಗದ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಭಾವಂತ ಕಲಾವಿದರಿದ್ದರು ಸರ್ಕಾರ ಅವರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ವಿಫಲವಾಗಿದೆ ಸರ್ಕಾರದ ಸೌಲತ್ತು ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಂದ ವಂಚಿತವಾಗಿದೆ ಎಂದು ಆರೋಪಿಸಿದರು.
ಒಕ್ಕೂಟದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಮಾತನಾಡಿ ಕೆಕೆಆರ್‍ಡಿಬಿಯಿಂದ ಸಾಂಸ್ಕøತಿಕ ಚಟುವಟಕೆಗಳಿಗೆ ಕ್ರೀಯಾ ಯೋಜನೆ ರೂಪಿಸಿ ಏಳು ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ಆಚರಿಸಬೇಕು. ಹಂಪಿ ಉತ್ಸವ ಮಾದರಿಯಲ್ಲಿ ಈ ಭಾಗದ ಐತಿಹಾಸಿಕ ಕ್ಷೇತ್ರಗಳ ಉತ್ಸವ, ಸಂತ ಶಿಶುನಾಳ ಶರೀಫ ಮಾದರಿಯಲ್ಲಿ ಈಭಾಗದ ಪ್ರಸಿದ್ಧ ತತ್ವಪದಕಾರ ಕಡಕೋಳ ಮಡಿವಾಳಪ್ಪನವರ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಬೀದರ್ ಜಿಲ್ಲೆಯಲ್ಲಿ ಕನ್ನಡದ ಕವಯತ್ರಿ ಜಯದೇವಿ ಲಿಗಾಡೆ, ಕಲಬುರಗಿಯಲ್ಲಿ ಎಸ್.ಎಂ.ಪಂಡಿತ್, ಯಾದಗಿರಿ ಜಿಲ್ಲೆಯಲ್ಲಿ ರಂಗಂಪೇಟೆಯ ಎಂ.ಆರ್.ಬುದ್ಧಿವಂತ ಶೆಟ್ಟರ್, ರಾಯಚೂರಲ್ಲಿ ಪಂ.ಸಿದ್ಧರಾಮ ಜಂಬಲದಿನ್ನಿ, ಕೊಪ್ಪಳದಲ್ಲಿ ಡಾ.ಸಿದ್ಧಯ್ಯ ಪುರಾಣಿಕ, ಬಳ್ಳಾರಿಯಲ್ಲಿ ಸುಭದ್ರಮ್ಮ ಮನ್ಸೂರು, ವಿಜಯನಗರದಲ್ಲಿ ಎಂ.ಪಿ.ಪ್ರಕಾಶ ಹೆಸರಲ್ಲಿ ಟ್ರಸ್ ಸ್ಥಾಪಿಸಬೇಕು. ಪದ್ಮಶ್ರೀ, ಪದ್ಮವಿಭೂಷಣ, ರಾಜ್ಯೋತ್ಸವ ಪುರಸ್ಕøತ ಕಲಾವಿದರಿಗೆ 10 ಸಾವಿರರೂ. ಮಾಶಾಸನ, ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಂತೆ ಕಲಾವಿದರಿಗಾಗಿ ಪ್ರತ್ಯೇಕ ಎಂಎಲ್‍ಸಿ ಕ್ಷೇತ್ರ ರಚಿಸಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಉಪಾಧ್ಯಕ್ಷ ಡಿಂಗ್ರಿ ನರೇಶ, ತಾಲೂಕು ಅಧ್ಯಕ್ಷ ಮಂಜುನಾಥ ಗುಡದನಾಳ, ಸದಸ್ಯರಾದ ಹಣುಮಂತರಾಯ ದೇವತ್ಕಲ್, ರಾಜಣ್ಣ ಜೇವರ್ಗಿ ಈ ಸಂದರ್ಭದಲ್ಲಿ ಇದ್ದರು.
