ಲಿಂಗಸುಗೂರು : ವಿಕಲಚೇತನರಿಗೆ ಲಸಿಕಾ ಕಾರ್ಯಕ್ರಮ
ಲಿಂಗಸುಗೂರು : ಸ್ಥಳೀಯ ಗುರುಭವನದಲ್ಲಿ ವಿಕಲಚೇತನರಿಗೆ
ಹಾಗೂ ಅವರ ಆರೈಕೆದಾರರಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಲಸಿಕಾ
ಮೇಲ್ವಿಚಾರಕ ಡಾ.ರಾಘವೇಂದ್ರ ಅವರು, ಸಾರ್ವಜನಿಕರು ಲಸಿಕೆಯ ಬಗ್ಗೆ ಯಾವುದೇ ಗಾಳಿ ಮಾತುಗಳಿಗೆ ಕಿವಿಗೊಡಬಾರದು. ಇಲ್ಲಸಲ್ಲದ ವದಂತಿಗಳನ್ನು ಹಚ್ಚಿಕೊಳ್ಳದೇ, ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗುವ ಮೂಲಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕೆಂದು ಕರೆ ನೀಡಿದರು.
ಆರ್‍ಪಿಡಿ ಟಾಸ್ಕ್ ಫೋರ್ಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಸುರೇಶ ಭಂಡಾರಿ, ತಾಲೂಕು ನಿರೀಕ್ಷಕ ಬಸವರಾಜ,ಸುರಕ್ಷಾಧಿಕಾರಿ ಅಪ್ಸರಾ, ಚೇತನ ಸಂಸ್ಥೆಯ ಅದ್ಯಕ್ಷ ಹುಸೇನ್‍ಬಾಷಾ, ಅಬ್ದುಲ್‍ಸತ್ತಾರ ಚೌದ್ರಿ, ಆಸ್ಕಿಹಾಳ ನಾಗರಾಜ, ವೀರಭದ್ರಪ್ಪ, ಸಮೀರ್, ದೇವಮ್ಮ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

