ರಾಯಚೂರು

ಸಾಹಿತಿಗೆ ಮಸಿ ಬಳಿದ ವಕೀಲೆಯ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ

ಲಿಂಗಸುಗೂರು : ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್‍ರ ಮುಖಕ್ಕೆ ಮಸಿ ಹಚ್ಚುವ ಮೂಲಕ ಉದ್ಘಟತನ ತೋರಿರುವ ವಕೀಲೆ ಮೀರಾ ರಾಘವೇಂದ್ರ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಗಡಿಪಾರು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಿಸಿದರು.


ತಹಸೀಲ್ದಾರ್ ಚಾಮರಾಜರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅವರು, ನ್ಯಾಯಾಲಯದ ಆವರಣದಲ್ಲಿಯೇ ಹಲ್ಲೆ, ದೌರ್ಜನ್ಯಕ್ಕೆ ಮುಂದಾದ ನ್ಯಾಯವಾದಿಯ ವರ್ತನೆ ವಿಷಾದನೀಯ. ಕರ್ನಾಟಕ ದಲಿತ ಸಾಹಿತಿಗಳಾದ ಕಲಬುರ್ಗಿ ಮತ್ತು ಗೌರಿ ಲಂಕೇಶ ಹತ್ಯೆ ಮಾಡಿ ದಕ್ಕಿಸಿಕೊಂಡಿರುವ ಇಂತಹ ವ್ಯವಸ್ಥೆ ವಿರುದ್ದ ಮೊದಲಿನಿಂದಲೂ ಹಿಂದುಳಿದ ವರ್ಗಗಳ, ಶೋಷಿತರ, ದಲಿತರ, ಅಲ್ಪ ಸಂಖ್ಯಾತರ ಪರವಾಗಿ ಹಿಂದುತ್ವ ವಾದಿಗಳ ವಿರುದ್ದ ಧ್ವನಿ ಎತ್ತಿದ ಪ್ರೋ. ಭಗವಾನ ಮುಖಕ್ಕೆ ಮಸಿ ಬಳಿದ ಕೃತ್ಯ ಖಂಡನಿಯವಾಗಿದೆ.


ಇದೊಂದು ವ್ಯವಸ್ಥಿತ ಸಂಚಾಗಿದ್ದು ವಕೀಲೆ ಮೀರಾ ರಾಘವೇಂದ್ರ ಹತಾಶೆಗೊಂಡು ಈ ಕೃತ್ಯ ಎಸಿಗಿದ್ದಾಳೆ. ಈ ಕ್ರಿಯೆ ಕೆವಲ ಭಗವಾನವರಿಗೆ ಮಾತ್ರ ಅವಮಾನ ಮಾಡಿಲ್ಲಾ, ಇಡಿ ರಾಜ್ಯದ ಬಹುಸಂಖ್ಯಾತರಿಗೆ ಮಾಡಿದ ಅವಮಾನವಾಗಿದೆ. ವಕೀಲೆಯ ಕೃತ್ಯ ಇಡಿ ವಕೀಲ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಕೂಡಲೆ ಮೀರಾ ರಾಘವೇಂದ್ರ ವಿರುದ್ದ ಕಾನೂನು ಕ್ರಮ ಜರುಗಿಸಿ ಮುಂದೆ ಇಂತಹ ಘಟನೆ ಜರುಗದಂತೆ ಕ್ರಮಕೈಗೊಳ್ಳಲು ಎಂದು ಆಗ್ರಹಿಸಿದರು.


ದಲಿತಪರ ಒಕ್ಕೂಟ ತಾಲೂಕಾ ಸಮಿತಿಯ ಮುಖಂಡರಾದ ಹನುಮಂತಪ್ಪ ಕುಣಿಕೆಲ್ಲೂರ, ನಿಂಗಪ್ಪ ಪರಂಗಿ, ಅಂಬಣ್ಣ ಬೆನಕನಾಳ, ಮೌನೇಶ ಐದನಾಳ, ದುರ್ಗಪ್ಪ, ಚಿನ್ನಪ್ಪಕಂದ್ರಳ್ಳಿ, ಹುಲಗಪ್ಪ ಕೆಸರಹಟ್ಟಿ, ಅಂಜನೇಯ ಭಂಡಾರಿ, ರಮೇಶ ಗೋಸ್ಲೆ, ಹನುಮಂತ, ಸಂಜೀವಪ್ಪ ಹುನುಕುಂಟಿ, ಶಿವಪ್ಪ ಪರಂಗಿ, ಚಿದಾನಂದ, ಶಿವಣ್ಣ ಮ್ಯಾಗೇರಿ, ಗದ್ದೆಪ್ಪ ಚಿತ್ತಾಪೂರ, ಯಮನೂರ ವ್ಯಾಕರನಾಳ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!