ರಾಯಚೂರು

ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಜಿಲ್ಲಾಧಿಕಾರಿ ನಡೆ ಖಂಡನೀಯ : ಶಿವಕುಮಾರ ಮ್ಯಾಗಳಮನಿ

ರಾಯಚೂರು : ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI), ಕವಿತಾಳ ನವ ನಿರ್ಮಾಣ ವೇದಿಕೆ ಮತ್ತು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಹಾಗೂ ಜೈ ಭಾರತ ಸಂಘಟನೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಜಂಟಿಯಾಗಿ ಪತ್ರಿಕಾ ಗೋಷ್ಠಿಯ ನಡೆಸಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ SFI ರಾಜ್ಯ ಉಪಾಧ್ಯಕ್ಷರು ಹಾಗೂ ಕವಿತಾಳ ನವ ನಿರ್ಮಾಣ ವೇದಿಕೆಯ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಕವಿತಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸ್ವಚ್ಚ ಭಾರತ್ ಮಿಷನ್, ಸೇರಿ ಇತರೆ ಯೋಜನೆಗಳಡಿಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಮಂಜೂರಾಗಿದ್ದ ವೈಯಕ್ತಿಕ ಶೌಚಾಲಯಗಳನ್ನು ಪಟ್ಟಣ ಪಂಚಾಯತ್ ಸದಸ್ಯರು ತಾವೆ ಫಲಾನುಭವಿಗಳಾಗಿ ಮತ್ತು ತಮ್ಮ ಸಂಬಧಿಕರನ್ನು ಫಲಾನುಭವಿಗಳನ್ನಾಗಿ ಮಾಡಿ ಹಾಗೂ ನಾಲ್ಕೈದು ವರ್ಷಗಳ ಹಿಂದೆ ನಿರ್ಮಿಸಿದ ಹಳೆಯ ಶೌಚಾಲಯಗಳಿಗೆ ಹೊಸದಾಗಿ ನಿರ್ಮಿಸಿದ್ದೇವೆಂದು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಸುಮಾರು 48 ಕ್ಕೂ ಹೆಚ್ಚಿನ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಸುಮಾರು 14,43,295/- (ಹದಿನಾಲ್ಕ ಲಕ್ಷ ನಲವತ್ತು ಮೂರು ಸಾವಿರ ಎರಡು ನೂರಾ ತೊಂಬತ್ತೈದು ರೂಪಾಯಿಗಳು)ಕ್ಕೂ ಅಧಿಕ ಹಣವನ್ನು ಬೋಗಸ್ ಬಿಲ್ ಮಾಡಿ ಹಣ ಲೂಟಿ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಇದಕ್ಕೆ ಜಿಲ್ಲಾ ಯೋಜನಾಧಿಕಾರಿ, ಪಂಚಾಯತ್ ಮುಖ್ಯಾಧಿಕಾರಿ, ಎಇಇ, ಜೆ.ಇ ಸೇರಿ ಇತರರು ಸಾಥ್ ಕೊಟ್ಟಿದ್ದು ದುರಂತ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಈ ಆಕ್ರಮವನ್ನು ತನಿಖೆ ನೆಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ DYFI, SFI, ಕವಿತಾಳ ನವ ನಿರ್ಮಾಣ ವೇದಿಕೆ ಮತ್ತು ಜೈ ಭಾರತ್ ಸಂಘಟನೆ ಗಳ ನೇತೃತ್ವದಲ್ಲಿ ನಾಲ್ಕು ದಿನಗಳ ಹೋರಾಟ ಮತ್ತು ಉಪವಾಸ ಸತ್ಯಾಗ್ರಹವನ್ನು ಮಾಡಲಾಗಿತ್ತು. ಇದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳ ನಿದರ್ಶನದಂತೆ ತನಿಖಾ ತಂಡ ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು ಕ್ರಮಕ್ಕೆ ಆಗ್ರಹಿಸಿ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಮೇಲಿನ ಸಂಘಟನೆಗಳ ನೇತೃತ್ವದಲ್ಲಿ ಎರಡನೇ ಹಂತದ ಎರಡು ದಿನಗಳ ನಿರಂತರ ಹೋರಾಟ ಮಾಡಿ ಗಡುವು ನೀಡಿದ್ದೇವು ಭರವಸೆಯಂತೆ ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಮುಂದುವರೆದು ಈಗ ತನಿಖಾ ವರದಿ ಬಂದು ತಿಂಗಳುಗಳೇ ಕಳೆದಿವೆ ಆದರೆ ಅದನ್ನು ಆಧಾರಿಸಿ ಜಿಲ್ಲಾಧಿಕಾರಿ ಇಲ್ಲಿಯವರೆಗೆ ತಪ್ಪಿತಸ್ಥರ ಮೇಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದು ನಮ್ಮನ್ನು ಹತಾಶೆ ಗೊಳಿಸಿದೆ ಮತ್ತು ಯಾವುದೋ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಭ್ರಷ್ಟರನ್ನು ಬಚಾವ್ ಮಾಡುತ್ತಿರುವ ಅನುಮಾನಗಳು ಕಾಡುತ್ತಿದೆ ಎಂದರು.

ಜಿಲ್ಲಾಧಿಕಾರಿ ಗಳು ಯಾವುದೇ ಒತ್ತಡಕ್ಕೆ ಮಣಿಯದೆ ಈ ಕೂಡಲೇ ಆಕ್ರಮ ದಲ್ಲಿ ಭಾಗಿಯಾದ ಪಟ್ಟಣ ಪಂಚಾಯತ್ ಹಾಲಿ ಅಧ್ಯಕ್ಷರಾದ ಹೀನಾಸುಲ್ತಾನ್ ಗಂಡ ಗಪೂರ್ ಸಾಬ್, ಹಾಗೂ ಸದಸ್ಯರಾದ ಎಚ್. ಬಸವರಾಜ, ಮೌನೇಶ ಪೂಜಾರಿ, ಮಾಜಿ ಅಧ್ಯಕ್ಷ ಮೌನೇಶ ಬುಳ್ಳಾಪುರ, ಖಾಜಾಪಾಷ, ಮೌನೇಶ್ ನಾಯಕ, ಯಲ್ಲಮ್ಮ ಮ್ಯಾಗಳಮನಿಯವರ ಸಂಬಂಧಿಕರ ಹೆಸರುಗಳು ಕೇಳಿ ಬಂದಿವೆ. ಇವರುಗಳ ಸದಸ್ಯತ್ವ ವನ್ನು ಅನರ್ಹಗೊಳಿಸಬೇಕು ಹಾಗೂ ಇದಕ್ಕೆ ಸಹಕಾರ ನೀಡಿದ ಜೆ.ಇ.ಮಲ್ಲಪ್ಪ, ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಈರಣ್ಣ ಜಗ್ಲಿ, ಯೋಜನಾ ನಿರ್ದೇಶಕರಾದ ಮಹೇಂದ್ರ ಕುಮಾರ್, ಎ.ಇಇ ಇವರ ಮೇಲೆ ಸಂಬಂಧಿಸಿದ ಕಾಯಿದೆಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಹಾಗೂ SFC ಮತ್ತು 15ನೇ ಹಣಕಾಸಿನ ಕಾಮಗಾರಿಗೆ ಮಾಡಿದ ಟೆಂಡರ್ ಪ್ರಕ್ರಿಯೆಯಲ್ಲಿ ಕಿರಿಯ ಅಭಿಯಂತರರು ಮಲ್ಲಪ್ಪ ನಿಯಮಗಳನ್ನು ಗಾಳಿಗೆ ತೂರಿ ತನಗೆ ಬೇಕಿದ್ದವರಿಗೆ ಕಾಮಗಾರಿಯ ಟೆಂಡರ್ ನೀಡಿ ಸರ್ಕಾರದ ಹಣ ಲೂಟಿ ಮಾಡಲು ಮುಂದಾಗಿದ್ದರೆ. ಈ ಕೂಡಲೇ ಟೆಂಡರ್ ರದ್ದುಗೊಳಿಸಿ ನಿಯಮಾನುಸಾರ ಹೊಸ ಟೆಂಡರ್ ಕರೆಯಬೇಕು ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ತೋರಿದರೆ ನಮ್ಮ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪಟ್ಟಣದ ನಾಗರಿಕರೊಂದಿಗೆ ಮುಂದಿನವಾರ ರಸ್ತೆ ತಡೆ ಹಾಗೂ ಉಗ್ರ ಸ್ವರೂಪದ ಹೋರಾಟ ಸೇರಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು ಈ ಸುದ್ದಿಗೋಷ್ಠಿ ಮೂಲಕ ಎಚ್ಚರಿಸಿದರು.

ಈ ಸಂಧರ್ಭದಲ್ಲಿ DYFI ಅಧ್ಯಕ್ಷರಾದ ಮಹಮ್ಮದ್ ರಫಿ, SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, DYFI ಮುಖಂಡರಾದ ಮಿಥುನ್ ರಾಜ್, ಮುನ್ನಾವರ್, ವಕೀಲರಾದ ಜುನೈದ್ ಮರ್ಚೇಡ್ ಇದ್ದರು.

Leave a Reply

Your email address will not be published. Required fields are marked *

error: Content is protected !!