ಶೀಲಹಳ್ಳಿ ಗ್ರಾಮದ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ
ಲಿಂಗಸುಗೂರು : ತಾಲೂಕಿನ ಶೀಲಹಳ್ಳಿ ಗ್ರಾಮದ ಹಿರಿಯ ಮುಖಂಡರುಗಳು ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಸಮ್ಮುಖದಲ್ಲಿ ನಾನಾ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನಪರ ಯೋಜನೆಗಳನ್ನು ಹಾಗೂ ರೈತರ, ಬಡವರ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡು ಕ್ಷೇತ್ರದಲ್ಲಿ ಮತ್ತೊಮ್ಮೆ ಶಾಸಕರಾಗಿ ಮಾನಪ್ಪ ವಜ್ಜಲ್‍ರು ಆಯ್ಕೆ ಮಾಡಬೇಕೆನ್ನುವ ಉದ್ದೇಶದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆಂದು ಮುಖಂಡರುಗಳಾದ ತಿಪ್ಪಣ್ಣ ಬಡಿಗೇರ್, ಈರಪ್ಪ ಮಜ್ಗಿ, ಹನುಮಂತ ಗೋನವಾಟ್ಲಾ ಹೇಳಿದರು.
ಹನುಮಂತ ಗುಡಿಹಿಂದಿನ, ಬಸಪ್ಪ ಗೋನವಾಟ್ಲಾ, ಕಂಠೆಪ್ಪ ಮೆಟಗೇರಿ, ಮನೋಹರ ಬಡಿಗೇರ್, ವಿಶ್ವನಾಥ ಶೀಲಹಳ್ಳಿ, ಹುಲುಗಪ್ಪ ಜೂಲಗುಡ್ಡ, ನಾಗಪ್ಪ ಹೊರೇಕುರುಬರು ಸೇರಿ ಇತರರು ಇದ್ದರು.

