ರಾಯಚೂರು

ಲಿಂಗಸುಗೂರಲ್ಲಿ ಸಂಭ್ರಮದ ಕ್ರಿಸ್‍ಮಸ್ ಆಚರಣೆ

ಲಿಂಗಸುಗೂರು : ಪಟ್ಟಣದಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಣೆ ಮಾಡಿದರು.
ಸ್ಥಳೀಯ ಲೂರ್ದ್‍ಮಾತೆ ದೇವಾಲಯದಲ್ಲಿ ಗುರುವಾರ ರಾತ್ರಿ ಕ್ರಿಸ್‍ಮಸ್ ಆಚರಣೆಯ ದಿವ್ಯಾಬಲಿ ಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡಿದ ಚರ್ಚ್ ಫಾದರ್ ಆನಂದಕುಮಾರ, ದೇವರ ಮಗನಾಗಿದ್ದ ಯೇಸು ದನಗಳ ಗೊದಲಿಯಲ್ಲಿ ಜನಿಸಿ ಬಡವರೊಂದಿಗೆ ಪ್ರಭು ಯೇಸು ಇದ್ದಾರೆಂದು ನಿರೂಪಿಸಿದ್ದಾರೆ.

ಅನೀತಿ, ಅನ್ಯಾಯದ ಸಂಕೋಲೆಯ ಬಂಧನದಲ್ಲಿದ್ದವರೊಂದಿಗೆ ಇರುವರು. ಕನಿಷ್ಟ ಮಾನವೀಯ ಹಕ್ಕುಗಳನ್ನು ಪಡೆಯಲು ಹಾಗೂ ಕೊರೋನಾ ವೈರಸ್ ನಿಂದ ಹೋರಾಡುವವರೊಂದಿಗೆ ಇದ್ದು, ತನ್ನ ಕೃಪಾವರಗಳಿಂದ ರಕ್ಷಿಸುವರು. ಇಂತಹ ವ್ಯಕ್ತಿಗಳ ಉದ್ಧಾರಕ್ಕೂ ದುಡಿಯುವವರ ಬೆನ್ನೆಲುಬಾಗಿರುವರು.


ಇಂದು ನಾವು ಹ್ಯಾಪಿ ಕ್ರಿಸ್‍ಮಸ್, ಮೆರ್ರಿ ಕ್ರಿಸ್‍ಮಸ್ ಎಂದು ಅಭಿನಂಧಿಸುವಾಗ, ಭಗವಂತನ ಶಾಂತಿ, ಪ್ರೀತಿ, ಸಮಾಧಾನದ ಸಂದೇಶವು ನಮ್ಮ ಸಮಾಜವನ್ನು ಕುಟುಂಬವನ್ನು ಪರಿವರ್ತಿಸಲು ನಮ್ಮ ಮನಮನೆಗಳಲ್ಲಿ ದೈವಿಪ್ರಕಾಶ ತುಂಬಿತುಳಕಲಿ ಎಂದು ಹಾರೈಸಿದರು.


ಪಾಲನಾ ಸಮಿತಿ ಅಧ್ಯಕ್ಷ ಅರುಣಕುಮಾರ್, ಕಥೋಲಿಕ್ ಸಂಘದ ಅಧ್ಯಕ್ಷ ಅಮರೇಶ ಘಂಟಿ, ಶಾಂತಪ್ಪ, ಮುಖಂಡರಾದ ಹೆಚ್.ಬಿ.ಮುರಾರಿ, ಕುಪ್ಪಣ್ಣ ಕೊಡ್ಲಿ ಕಸಬಾಲಿಂಗಸುಗೂರು, ವಿಶ್ವಾಸಪ್ಪ ಮಾಸ್ತರ್, ಚೌರಪ್ಪ ಲಿಟಲ್ ಪ್ಲವರ್ ಶಾಲೆಯ ಕನ್ನಾಸ್ತ್ರೀಯರು ಸೇರಿ ನೂರಾರು ಭಕ್ತರು ಹಬ್ಬದ ಸಂಭ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!