ಅವಿರೋಧ ಆಯ್ಕೆ : ನೂತನ ಸದಸ್ಯರಿಗೆ ಸನ್ಮಾನ
ಲಿಂಗಸುಗೂರು : ತಾಲೂಕಿನ ಗೊರೆಬಾಳ ಗ್ರಾಮ ಪಂಚಾಯತಿಗೆ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಹಟ್ಟಿಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರು ಸನ್ಮಾನಿಸಿ ಗೌರವಿಸಿದರು.
ಗೊರೆಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾಲಭಾವಿ ಗ್ರಾಮ ಮತ್ತು ಹಾಲಭಾವಿ ತಾಂಡ
ಶೇಕಮ್ಮ ವೇಂಕನಗೌಡ ಮಾಲಿ ಪಾಟೀಲ್,
ಲಲಿತಾ ಶಂಕರ ಚಾವ್ಹಾಣ,
ಬಸವರಾಜಪ್ಪ ಸೇದಿಮನಿ,
ಅದಪ್ಪ ಪೂಜಾರಿ,
ಬಸಮ್ಮ ಶರಣಪ್ಪ ಅಗಸಿಮುಂದಿನ,
ಅಶ್ವಿನಿ ಗೋಪಾಲ ರಾಠೊಡ,
ರೇಣುಕಾ ಚಂದು ಚಾವ್ಹಾಣ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಅಧ್ಯಕ್ಷ ವೀರನಗೌಡ ಪಾಟೀಲ್, ತಾ.ಪಂ. ಸದಸ್ಯ ಶಂಕರ ಚಾವ್ಹಾಣ, ಮುಖಂಡರಾದ ರವಿಗೌಡ ಹಾಲಭಾವಿ, ಈರಪ್ಪ ಹಾಲಭಾವಿ, ರಮೇಶ್ ಕಟ್ಟಿಮನಿ ಸೇರಿ ಇತರರು ಇದ್ದರು.

