ರಾಯಚೂರು

ಸಾರಿಗೆ ಮುಷ್ಕರಕ್ಕೆ ಪ್ರಯಾಣಿಕರ ತತ್ತರ : ಖಾಸಗಿ ವಾಹನಗಳ ವ್ಯವಸ್ಥೆ

ಲಿಂಗಸುಗೂರು : ಸಾರಿಗೆ ಇಲಾಖೆ ನೌಕರರ ಮುಷ್ಕರದ ಪರಿಣಾಮ ಗ್ರಾಮೀಣ, ಪಟ್ಟಣ ಪ್ರದೇಶಕ್ಕೆ ತೆರಳುವ ಪ್ರಯಾಣಿಕರು ಬುಧವಾರ ತತ್ತರಿಸಿದ ಘಟನೆ ಜರುಗಿತು. ಪರ್ಯಾಯವಾಗಿ ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು
ಅವರ ನೇತೃತ್ವದಲ್ಲಿ ಪೋಲಿಸರು ಖಾಸಗಿ ವಾಹನಗಳ ವ್ಯವಸ್ಥೆ ಮಾಡಿ ಅಗತ್ಯ ಸಾರಿಗೆ ಸವಲತ್ತನ್ನು ಕಲ್ಪಿಸಿದರು.

ಬುಧವಾರ ಬೆಳಗಿನಿಂದಲೇ ಬಸ್ಟಾಂಡ್‍ನಲ್ಲಿ ಒಂದೂ ಬಸ್‍ಗಳೂ ಬಾರದೇ ಇರುವ ಪರಿಣಾಮ ನಿಲ್ದಾಣವೆಲ್ಲಾ ಬಿಕೋ ಎನ್ನುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ವಾಹನಗಳ ಮಾಲೀಕರು ಹೆಚ್ಚಿನ ದರ ವಿಧಿಸಿ ಪ್ರಯಾಣಿಕರನ್ನು ಕರೆದೊಯ್ಯಲು ಸಿದ್ಧತೆ ನಡೆಸಿದ್ದರು.
ಕೂಡಲೇ ವಿಷಯವನ್ನರಿತ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ನಿಗದಿತ ಸಾರಿಗೆ ವೆಚ್ಚವನ್ನು ಪಡೆದು ಪ್ರಯಾಣಿಕರನ್ನು ಅವರವರ ಊರುಗಳಿಗೆ ತಲುಪಿಸುವಂತೆ ಸೂಚನೆ ನೀಡಿದರು.

ಖಾಸಗಿ ಟ್ಯಾಕ್ಸಿ ಚಾಲಕರ ಸಂಘದ ಅದ್ಯಕ್ಷ ರುಸ್ತುಂಖಾನ್‍ರ
ಜೊತೆ ಚರ್ಚಿಸಿದ ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಬೇಕು. ಸಾರಿಗೆ ಇಲಾಖೆಯ ನಿಗದಿತ ದರವನ್ನು ಪಡೆದು ಪ್ರಯಾಣಿಕರಿಗೆ ಊರುಗಳಿಗೆ
ತಲುಪಿಸಬೇಕು ಎಂದು ಸಮಝಾಯಿಸಿದರು. ಇದಕ್ಕೆ ಸಮ್ಮತಿಸಿದ ಖಾಸಗಿ ವಾಹನಗಳ ಮಾಲೀಕರು, ನಿಗದಿತ ದರ ಪಡೆದುಕೊಂಡೇ ಅಗತ್ಯ ಇರುವವರಿಗೆ ಸಾರಿಗೆ ಸವಲತ್ತು ಒದಗಿಸಿದರು.ಸಿಪಿಐ, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ಸೇರಿ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!