ಲಿಂಗಸುಗೂರು : ಎನ್‍ಜಿಓ ಕಾಲೋನಿ ಎರಡು ಮನೆಗಳಲ್ಲಿ ಕಳ್ಳತನ..!
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ 7ನೇ ವಾರ್ಡ್‍ನ ಎನ್‍ಜಿಓ ಕಾಲೋನಿಯ ಎರಡು ಮನೆಗಳಲ್ಲಿ ಕಳ್ಳತನವಾಗಿದೆ. ಪದೇ-ಪದೇ ಈ ಬಡಾವಣೆಯಲ್ಲಿ
ಸಣ್ಣ-ಪುಟ್ಟ ಕಳುವಿನ ಪ್ರಕರಣಗಳು ಮರುಕಳಿಸುತ್ತಿರುವ ಪರಿಣಾಮ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದರು.
ಒಂದು ಮನೆಯಲ್ಲಿ ಸುಮಾರು 50 ಗ್ರಾಂ ಬೆಳ್ಳಿ ಇನ್ನೊಂದು
ಮನೆಯಲ್ಲಿ ಅಲ್ಪ ಮೊತ್ತದ ಹಣ ಕಳುವಾಗಿದೆ ಎಂದು ಹೇಳಲಾಗುತ್ತಿದೆ.ಆದರೆ, ಅಕ್ಕಪಕ್ಕದವರೇ ಈ ಕುಕೃತ್ಯ ಎಸಗಿರಬಹುದು ಎಂದು ಸ್ಥಳಕ್ಕೆ ಪರಿಶೀಲನೆಗೆಂದು ತೆರಳಿದ ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ಮನೆಯವರನ್ನು
ಮಾತಾಡಿಸಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಪುರಸಭೆ ವ್ಯಾಪ್ತಿಯ ಸುಸಜ್ಜಿತ ಬಡಾವಣೆಗಳಲ್ಲೊಂದಾದ ಎನ್‍ಜಿಓ ಕಾಲೋನಿಯಲ್ಲಿ ಪ್ರತಿಷ್ಠಿತ ಉದ್ಯಮಿಗಳು, ರಾಜಕಾರಣಿಗಳು,ಪತ್ರಕರ್ತರ ಮನೆಗಳಿವೆ. ಎರಡ್ಮೂರು ಮನೆಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಕಳ್ಳರು ಪದೇ ಪದೇ ಆ ಮನೆಗಳಲ್ಲಿಯೇ ಕಳ್ಳತನಕ್ಕೆ ಮುಂದಾಗುತ್ತಾರೆ. ಕೂಡಲೇ ಪೋಲಿಸ್ ಇಲಾಖೆ ಪಟ್ಟಣದಲ್ಲಿ ಆಗಾಗ್ಗೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಬೇಧಿಸಲು
ಮುಂದಾಗಬೇಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪಿಎಸೈ ಪ್ರಕಾಶರೆಡ್ಡಿ, ಎನ್‍ಜಿಓ ಕಾಲೋನಿಯಲ್ಲಿ ಕಳುವು ಆಗಿರುವ ಬಗ್ಗೆ ದೂರು ದಾಖಲಾಗಿಲ್ಲ. ಆದಾಗ್ಯೂ, ಕೆಲವು ಕಿಡಿಗೇಡಿಗಳ ಬಗ್ಗೆ ಮನೆಯವರು ಮಾಹಿತಿ ನೀಡಿದ ಮೇರೆಗೆ ಅನುಮಾನವಿದ್ದು, ಅವರ ಬಂಧನಕ್ಕೆ ಜಾಲ ಬೀಸಲಾಗಿದೆ. ಬರುವ ದಿನಗಳಲ್ಲಿ
ಇಂಥಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದರು.

