ಟಾಸ್ಕ್‍ಫೋರ್ಸ್ ತುರ್ತುಸಭೆ : ಸೊಂಕು ನಿಯಂತ್ರಣಕ್ಕೆ ಮುಂದಾಗಲು ಶಾಸಕರ ಕರೆ
ಲಿಂಗಸುಗೂರು : ಕೋವಿಡ್ ಎರಡನೇ ಅಲೆ ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ತಾಲೂಕಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಮೂಲಕ ಕೊರೊನಾ ತಡೆಗೆ ಶ್ರಮಿಸಬೇಕೆಂದು ಶಾಸಕ ಡಿ.ಎಸ್.ಹೂಲಗೇರಿ ಕರೆ
ನೀಡಿದರು.
ಸ್ಥಳೀಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಟಾಸ್ಕ್‍ಫೋರ್ಸ್ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಆರೋಗ್ಯ, ಪೊಲೀಸ್, ಕಂದಾಯ ಇಲಾಖೆಗಳ ಸಲಹೆ ಸೂಚನೆಯಂತೆ
ವಾರಿಯರ್ಸಗಳು ಪಾಲಿಸಬೇಕು. ಸಾರ್ವಜನಿಕರು ಕರೊನಾ
ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಹೇಳಿದರು.
ಏ.25 ರವರೆಗೆ ತಾಲೂಕಿನಲ್ಲಿ 8170 ಜನರ ಕೊರೊನಾ ತಪಾಸಣೆ ನಡೆಸಲಾಗಿದ್ದು, ಹಟ್ಟಿ 66, ಮುದಗಲ್ 30 ಸೇರಿ 372 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೂ ತಾಲೂಕಿನಲ್ಲಿ 45 ವರ್ಷ ಮೇಲ್ಪಟ್ಟ 1.45 ಲಕ್ಷ ಜನರಿಗೆ ವ್ಯಾಕ್ಸಿನ ಹಾಕಲಾಗಿದೆ. ಸರಕಾರಿ ಆಸ್ಪತ್ರೆಯಲ್ಲಿಯೇ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಕರಡಕಲ್ ಹೊರವಲಯದ ವಸತಿ ನಿಲಯದಲ್ಲಿ ಕ್ವಾರಂಟೈನ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಾಲೂಕುಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್ ಮಾಹಿತಿ ನೀಡಿದರು. ಇದಕ್ಕೆ
ಪ್ರತಿಕ್ರಿಯಿಸಿದ ಶಾಸಕರು, ಆಂಬುಲೆನ್ಸ್ ಕೊರತೆಯಾಗದಂತೆ
ನೋಡಿಕೊಳ್ಳಬೇಕು. ಕೋವಿಡ್ ಲಸಿಕೆ ಪ್ರತಿಯೊಬ್ಬರಿಗೂ ತಲುಪಿಸುವ ವ್ಯವಸ್ಥೆಯಾಗಬೇಕು ಎಂದರು.
ತಹಸೀಲ್ದಾರ್ ನಾಗಪ್ರಸಾದ ಮಾತನಾಡಿ, ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು ಮಾಸ್ಕ್, ಸ್ಯಾನಿಟೈಜರ್, ಪರಸ್ಪರ ಅಂತರ ಕಾಪಾಡಿದಾಗ ಮಾತ್ರ ಸಾವಿಗೆ ಕಡಿವಾಣ ಹಾಕಬಹುದೆಂದು ಹೇಳಿದರು.ಸಿಪಿಐ ರಮೇಶ ಕುಲಕರ್ಣಿ ಮಾತನಾಡಿ, ಮಾಸ್ಕ್ ಧರಿಸದೆ ಸಂಚರಿಸುವ 560
ಜನರಿಗೆ ದಂಡ ಹಾಕಿ 56 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ ಎಂದುು ಹೇಳಿದರು. ಪಿಎಸ್‍ಐ ಪ್ರಕಾಶರಡ್ಡಿ ಡಂಬಳ ಮಾತನಾಡಿ, ಪೊಲೀಸ್ ಸಿಬ್ಬಂದಿಗಳಿಗೆ
ಮಾಸ್ಕ್ ಮತ್ತು ಸ್ಯಾನಿಟೈಜರ್ ಒದಗಿಸಬೇಕೆಂದು ಮನವಿ ಮಾಡಿದರು.
ತಾಲೂಕಿನಲ್ಲಿ ಮಹಾಮಾರಿ ಕೋವಿಡ ಹರಡದಂತೆ ಹಾಗೂ
ನಿಯಂತ್ರಣಕ್ಕೆ ಸೂಕ್ತ ಮುಂಜಾಗೃತ ಕ್ರಮ ಕೈಗೊಳ್ಳಬೆಕೆಂದು
ಶಾಸಕ ಡಿಎಸ್ ಹುಲಗೇರಿ ತಾಲುಕು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಮಟ್ಟದ ಅಧಿಕಾರಿಗಳು ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪುರಸಭೆ ಅಧಿಕಾರಿಗಳು ತಮಗೆ ವಹಿಸಿದ ಜವಬ್ದಾರಿಯನ್ನು ಕಟ್ಟು ನಿಟ್ಟಾಗಿ ನಿರ್ವಹಿಸಬೇಕೆಂದು ತಿಳಿಸಿದರು.
ಸಿಡಿಪಿಓ ಶರಣಮ್ಮ ಮಾತನಾಡಿ, ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಿದ್ದು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಬಿಎಲ್‍ಓಗಳು ಸಕ್ರೀಯವಾಗಿ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆಂದರು.ಕೋವಿಡ್ ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ದ
ಕ್ರಮ ಜರುಗಿಸಲು ಶಿಪಾರಸ್ಸು ಮಾಡಬೇಕಾಗುತ್ತದೆ ಎಂದು ಶಾಸಕರು ಸಭೆಗೆ ಎಚ್ಚರಿಸಿ, ಜಾಗೃತಿಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಿದರು.ತಾ.ಪಂ. ಇಓ ಲಕ್ಷ್ಮಿದೇವಿ, ವಿವಿದ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

