ಬೈಕ್-ಬೈಕ್ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಮೂವರು ಗಂಭೀರ
ಲಿಂಗಸುಗೂರು : ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾದ ಘಟನೆ ಜರುಗಿದೆ.
ಮೃತನನ್ನು ಲಿಂಗಸುಗೂರು ಪಟ್ಟಣದ ನಿವಾಸಿ ರಿತೇಶ್ ತಂದೆ
ಮಾರ್ಕಂಡೆಪ್ಪ (18) ಎಂದು ಗುರುತಿಸಲಾಗಿದೆ. ಲಿಂಗಸುಗೂರಿನ ಸ್ವಾಮಿ ವಿವೇಕಾನಂದ ನಗರದ ಬಾಲಪ್ಪ ತಂದೆ ಗಂಗಪ್ಪ (21), ಮುದಗಲ್ ಪಟ್ಟಣದ ನಿವಾಸಿಗಳಾದ ದಾವಲಮಲಿಕ್ ತಂದೆ ಬಾಬುಸಾಬ (21), ರಹೆಮಾನಧುಲಾ
ತಂದೆ ರಾಜಾಸಾಬ (20) ಈ ಮೂವರಿಗೆ ತಲೆಗೆ, ಕಣ್ಣಿಗೆ ಪೆಟ್ಟುಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪಿಎಸ್‍ಐ ಪ್ರಕಾಶರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿ ತನಿಖೆ
ಕೈಗೊಂಡಿದ್ದಾರೆ.

