ಲಾಕ್‍ಡೌನ್ ಪರಿಣಾಮಕಾರಿಗೆ ಆಡಳಿತದ ಹರಸಾಹಸ ಮುಖ್ಯಾಧಿಕಾರಿ ಗಸ್ತು : ವ್ಯಾಪಾರಿಗಳಿಂದ ದಂಡ ವಸೂಲಿ
ವರದಿ ಖಾಜಾಹುಸೇನ್
ಲಿಂಗಸುಗೂರು : ಲಾಕ್‍ಡೌನ್ ಪರಿಣಾಮಕಾರಿಯಾಗಿಸಲು ಆಡಳಿತ ಹರಸಾಹಸ ಪಡುತ್ತಿದೆ. ಬೆಳಗ್ಗೆ 10 ಗಂಟೆಗೆ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಸಲು ಪುರಸಭೆ ಮುಖ್ಯಾಧಿಕಾರಿಗಳು ತಮ್ಮ ಪಟಾಲಯಂನೊಂದಿಗೆ
ವ್ಯಾಪಾರಿ ಮಳಿಗೆಗಳನ್ನು ಬಂದ್ ಮಾಡಿಸುವ ಜೊತೆಗೆ ದಂಡ ಹಾಗೂ ಕರ ವಸೂಲಿ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂತು.
ಸರಕಾರಿ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ತರಕಾರಿ, ಹಣ್ಣುಗಳ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಗಿದೆ. ನಸುಕಿನ 6 ಗಂಟೆಯಿಂದ 10 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ಕೊಡಲಾಗಿದೆ. ಹಾಲು, ಹಣ್ಣು, ತರಕಾರಿ,
ಬಾರ್‍ಶಾಪ್, ಬೇಕರಿ, ದಿನಸಿ ಸೇರಿ ಅಗತ್ಯ ವಸ್ತುಗಳ ವ್ಯಾಪಾರ
ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಪಟ್ಟಣದಲ್ಲಿ ಮಾತ್ರ ಬಟ್ಟೆ ಅಂಗಡಿ,ಎಲೆಕ್ಟ್ರಿಕಲ್,ಹಾರ್ಡ್‍ವೇರ್, ಬಾಂಡೆ ಸಾಮಾನು ಸೇರಿ ಮಾರುಕಟ್ಟೆಯಲ್ಲಿನ ಬಹುತೇಕ ಎಲ್ಲಾ ಅಂಗಡಿಗಳೂ ಓಪನ್ ಆಗಿರುತ್ತವೆ.
ಮುಖ್ಯಾಧಿಕಾರಿಗಳು ಮಾತ್ರ ನಿರಂತರವಾಗಿ ವ್ಯಾಪಾರಿ
ಮಳಿಗೆಗಳಿಗೆ ತೆರಳಿ ವಾರ್ಷಿಕ ಕರ ವಸೂಲು ಜೊತೆಗೆ ಮಾಸ್ಕ್, ಸಾಮಾಜಿಕ ಅಂತರ ಇಲ್ಲದ್ದಕ್ಕೆ ದಂಡ ಹಾಕುತ್ತಾ ಸಾಗಿದ್ದಾರೆ. ಈ ರೀತಿಯಾಗಿ ಪುರಸಭೆಗೆ ಆದಾಯವೇನೋ ಹೊಂಚುತ್ತಿದ್ದಾರೆ. ಆದರೆ, ಕೆಲ ಬಡ ವ್ಯಾಪಾರಿಗಳು
ಮಾತ್ರ ಅಧಿಕಾರಿಯ ವರ್ತನೆಗೆ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರೂ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರುತ್ತಿರುವ ಪ್ರಸಂಗಗಳೂ ಕಾಣಸಿಗುತ್ತವೆ. ಇದಕ್ಕೆ ಪೂರಕವಾಗಿ ಪೋಲಿಸ್ ಇಲಾಖೆ ಅಧಿಕಾರಿಗಳೂ ಜನರಿಂದ ದಂಡ ವಸೂಲಿ ಕಾರ್ಯಕ್ಕೆ ಇಳಿದಿದ್ದಾರೆ. ಕೇವಲ ದಂಡ ಹಾಕುವ ಬದಲು ಸಾರ್ವಜನಿಕರಲ್ಲಿ ಅರಿವು, ಜಾಗೃತಿ
ಮೂಡಿಸುವ ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್‍ಗಳ ಮಹ್ವದ ಬಗ್ಗೆಯೂ ತಿಳುವಳಿಗೆ ನೀಡುವ ಅಗತ್ಯತೆ ಇದೆ. ದಂಡ ಹಾಕಿದಾಗ ಸಂಬಂಧಿಸಿದವರಿಗೆ ಕನಿಷ್ಠ ಮಾಸ್ಕ್ ನೀಡುವ ವ್ಯವಸ್ಥೆಯಾದರೂ ಅಧಿಕಾರಿಗಳು ಮಾಡಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

