ಮದುವೆ ಸಂಭ್ರಮಕ್ಕೆ ತೆರೆ ತಹಸೀಲ್ದಾರ್ ಯಜಮಾನ್ ನೇತೃತ್ವದಲ್ಲಿ ದಾಳಿ, ಕಲ್ಯಾಣ ಮಂಟಪ ಸೀಜ್..!
ಲಿಂಗಸುಗೂರು : ಕೋವಿಡ್ ನಿಯಮಗಳನ್ನು ಮೀರಿ ಮದುವೆ ಕಾರ್ಯ ನಡೆದಿದ್ದ ಸ್ಥಳೀಯ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪಕ್ಕೆ ತಹಸೀಲ್ದಾರ್ ನಾಗಪ್ರಶಾಂತ ಯಜಮಾನ್ ನೇತೃತ್ವದಲ್ಲಿ ಅಧಿಕಾರಿ ತಂಡ ದಾಳಿ ಮಾಡಿ, ಮದುವೆಯನ್ನು ರದ್ದುಪಡಿಸಿ ಕಲ್ಯಾಣ ಮಂಟಪವನ್ನು ಸೀಜ್
ಮಾಡಲಾಯಿತು.
ಗುರುವಾರ ಮದುವೆ ಕಾರ್ಯ ಬೆಳಗಿನಿಂದಲೇ ಆರಂಭವಾಗಿತ್ತು.ಮಧ್ಯಾಹ್ನ ಊಟದ ವೇಳೆಗೆ ನಿಯಮಾನುಸಾರ ಇರಬೇಕಿದ್ದ 50 ಜನಕ್ಕಿಂತ
ಹೆಚ್ಚು ಜನ ಸೇರಿದ ಬಗ್ಗೆ ಖಚಿತ ಮಾಹಿತಿ ಪಡೆದ ತಹಸೀಲ್ದಾರರು ಪೋಲಿಸರು ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದರು. ಸ್ಥಳದಲ್ಲಿ ಹೆಚ್ಚಿನ ಜನ ಸೇರಿರುವುದನ್ನು ಕಂಡು ನಿಯಮಾನುಸಾರ ಕಲ್ಯಾಣ ಮಂಟಪವನ್ನು ಸೀಜ್ ಮಾಡುವಂತೆ ಪುರಸಭೆ
ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮತ್ತು ಈ ಬಗ್ಗೆ ಪ್ರಕರಣ ದಾಖಲು ಮಾಡುವಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಕೋವಿಡ್ ಪ್ರಕರಣಗಳ
ಮಧ್ಯೆಯೂ ಜನರಲ್ಲಿ ಜಾಗೃತಿ ಮೂಡದೇ ಇರುವುದು ದುರಂತವೇ ಸರಿ.

