ಪುರಸಭೆ ಆಶ್ರಯ ಸಮಿತಿಗೆ ನೇಮಕ : ಸನ್ಮಾನ
ಲಿಂಗಸುಗೂರು : ಸ್ಥಳೀಯ ಪುರಸಭೆ ಆಶ್ರಯ ಸಮಿತಿಗೆ ನಾಮನಿರ್ದೇಶನಗೊಂಡ ಬಿಜೆಪಿ ಹಿರಿಯ ಮುಖಂಡರಾದ ಶೋಭಾ ಕಾಟವಾ ಅವರನ್ನು ಬಿಜೆಪಿ ಮಹಿಳಾ ಮೋರ್ಚಾದಿಂದ ಸನ್ಮಾನಿಸಿ ಗೌರವಿಸಲಾಯಿತು.
ಎಲೆಮರಿಯ ಕಾಯಿಯಂತೆ ಪಕ್ಷಕ್ಕಾಗಿ ದುಡಿದು, ಸಂಘಟನೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ನೆಲೆಯೂರಲು ಕಾರಣರಾದವರಲ್ಲಿ ಒಬ್ಬರಾಗಿರುವ ಶೋಭಾ ಕಾಟವಾ ಅವರ ಸೇವೆಯನ್ನು ಗುರುತಿಸಿದ ಪಕ್ಷಕ್ಕೆ ಮಂಡಲ ಕಾರ್ಯದರ್ಶಿ ಜ್ಯೋತಿ ಸುಂಕದ್, ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸ್ಮೀತಾ ಅಂಗಡಿ ಅಭಿನಂದಿಸಿದರು.
ಸಚಿನ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅದ್ಯಕ್ಷೆ ಈರಮ್ಮ, ನೀಲಮ್ಮ, ಸೌಮ್ಯ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

