ಲಿಂಗಸುಗೂರು : ಸರಕಾರಿ ಆಸ್ಪತ್ರೆ ಮುಂದೆ ಪಾರ್ಕಿಂಗ್ ವ್ಯವಸ್ಥೆ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆ ಮುಂಭಾಗ
ದ್ವಿಚಕ್ರ ವಾಹನಗಳ ನಿಲುಗಡೆಗೆ ಮರಮ್ ಹಾಕಿಸುವ ಮೂಲಕ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದರು.
ಬಹುದಿನಗಳಿಂದ ಆಸ್ಪತ್ರೆ ಬಳಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ
ಪರಿಣಾಮ ಬರುವ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿದ್ದವು.ಪರಿಣಾಮ ಆಸ್ಪತ್ರೆ ಆವರಣದೊಳಗೆ ಆಂಬುಲೆನ್ಸ್‍ಗಳು ಹೋಗಲು ತೀವ್ರ ತೊಂದರೆಯಾಗುತ್ತಿತ್ತು. ಈ ಬಗ್ಗೆ ಹಲವು ಬಾರಿ ಪತ್ರಿಕೆ
ಬೆಳಕು ಚೆಲ್ಲಿತ್ತು. ಇದನ್ನು ಮನಗಂಡ ವೈದ್ಯಾಧಿಕಾರಿಗಳು
ಖುದ್ದು ಮುಂದೆ ನಿಂತು ಮರಮ್ ಹಾಕಿಸಿ ಸುಗಮವಾಗಿ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟರು. ವೈದ್ಯಾಧಿಕಾರಿಗಳ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ವೈದ್ಯಾಧಿಕಾರಿಗಳಿಗೆ ಅಟೋ ಚಾಲಕರ ಸಂಘದ ಅದ್ಯಕ್ಷ
ಬಾಬಾಜಾನಿ ಸೇರಿ ಇತರರು ಸಾಥ್ ನೀಡಿದರು.

