ಹಾಲುಮತ ಸಂಸ್ಕೃತಿ ವೈಭವ : ಡಿ.12ಕ್ಕೆ ಸಭೆ
ಲಿಂಗಸುಗೂರು :ಪ್ರತಿವರ್ಷ ಜನವರಿ ತಿಂಗಳಲ್ಲಿ ತಿಂಥಣಿ ಬ್ರಿಡ್ಜ್ ಶ್ರೀ ಕನಕಗುರು ಪೀಠದಲ್ಲಿ ಆಚರಿಸಲಾಗುವ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಕುರಿತು ಶ್ರೀ ಮಠದಲ್ಲಿ ಡಿ.12 ರಂದು ಸಭೆ ಕರೆಯಲಾಗಿದೆ ಎಂದು ಕನಕ ಗುರು ಪೀಠಧ್ಯಕ್ಷರಾದ
ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, 2021 ಜನವರಿ 12, 13 ಮತ್ತು 14 ರಂದು ‘ಹಾಲುಮತ ಸಂಸ್ಕೃತಿ ವೈಭವ’ ಕಾರ್ಯಕ್ರಮವನ್ನು ಆಚರಿಸುವ ಬಗ್ಗೆ ಚರ್ಚೆಮಾಡಿ ತೀರ್ಮಾನ ಕೈಗೊಳ್ಳಲಾಗುವದು. ಡಿ.12 ರಂದು ಮಧ್ಯಾಹ್ನ 12 ಗಂಟೆಗೆ ಜರುಗುವ ಸಭೆಯಲ್ಲಿ ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಕಲಬುರಗಿ, ಬೀದರ ಜಿಲ್ಲೆಗಳಿಂದ ಕುರುಬ ಸಮುದಾಯದ ಮುಖಂಡರು ಪಾಲ್ಗೊಂಡು ಸೂಕ್ತ ಸಲಹೆ ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಶ್ರೀಗಳು ತಿಳಿಸಿದ್ದಾರೆ.

