ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ನಮನ
ಲಿಂಗಸುಗೂರು : ತಾಲೂಕಿನ ಟಣಮನಕಲ್ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಹಾರ ಹಾಕಿ ಶಾಸಕ ಡಿ.ಎಸ್.ಹೂಲಗೇರಿ, ಗುರುಗುಂಟ ಸಂಸ್ಥಾನಿಕ ದೊರೆ ರಾಜಾ ಸೋಮನಾಥ ನಾಯಕರು ನಮನ ಸಲ್ಲಿಸಿದರು.
ಖಾಸಗಿ ಕಾರ್ಯಕ್ರಮಕ್ಕೆಂದು ಗ್ರಾಮಕ್ಕೆ ತೆರಳಿದ್ದ ಶಾಸಕರು ಗ್ರಾಮದಲ್ಲಿರುವ ವಾಲ್ಮೀಕಿ ವೃತ್ತಕ್ಕೆ ತೆರಳಿ ಪೂಜೆ ನೆರವೇರಿಸಿದರು.
ಲಿಂಗಸುಗೂರು ಪುರಸಭೆ ಉಪಾದ್ಯಕ್ಷ ಮಹ್ಮದ್ ರಫಿ, ಗುರಗುಂಟ ಗ್ರಾಮ ಪಂಚಾಯಿತಿ ಅದ್ಯಕ್ಷ ರಮೇಶ ಭೋವಿ, ಮುಖಂಡರಾದ ಪಾಮಯ್ಯ ಮುರಾರಿ, ನಂದೇಶ ನಾಯಕ, ಬಾಬುಸಾಬ, ವೆಂಕಟೇಶ ಗುತ್ತೇದಾರ ಸೇರಿ ಇತರರು ಇದ್ದರು.

