ರಾಯಚೂರು

ಲಿಂಗಸುಗೂರು : ಉರ್ದು ಶಾಲೆ ಮುಖ್ಯಶಿಕ್ಷಕಿ ವಯೋನಿವೃತ್ತಿ

ಲಿಂಗಸುಗೂರು : ಸ್ಥಳೀಯ ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಜಾಹೇದಾಬೇಗಂ ಅವರು ವಯೋನಿವೃತ್ತಿ ಹೊಂದಿದ್ದರಿಂದ ಶಾಲಾವರಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.


ಶಾಲೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಧ್ವಜದ ಕಟ್ಟೆಯನ್ನು ನಿರ್ಮಾಣ ಮಾಡಿಕೊಟ್ಟಿರುವ ಮುಖ್ಯಶಿಕ್ಷಕಿಯ ನಿವೃತ್ತಿ ಜೀವನ ಸುಖ ಹಾಗೂ ನೆಮ್ಮದಿಯಿಂದ ಕಳೆಯಲೆಂದು ಶುಭ ಹಾರೈಸಲಾಯಿತು.


ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಥೋಡ್, ಬಿಆರ್‍ಸಿ ಹನುಮಂತಪ್ಪ ಕುಳಗೇರಿ, ಸಿಆರ್‍ಪಿ ಸನಾವುಲ್ಲಾ, ಸರಕಾರಿ ನೌಕರರ ಸಂಘದ ಜಿಲ್ಲಾದ್ಯಕ್ಷ ಭೀಮಣ್ಣ ನಾಯಕ, ಶಿಕ್ಷಕರ ಸಂಘದ ಅದ್ಯಕ್ಷ ಗುರುಸಂಗಯ್ಯ ಗಣಾಚಾರಿ, ಉರ್ದು ಶಿಕ್ಷಕರ ಸಂಘದ ಅದ್ಯಕ್ಷ ಮಹ್ಮದ್ ಆಜಂ, ಎಸ್‍ಡಿಎಂಸಿ ಅದ್ಯಕ್ಷ ಅಬ್ದುಲ್ ರಶೀದ್, ಶಿಕ್ಷಕರಾದ ಮುಸ್ತಫಾ, ಮಹೆಬೂಬ, ಪುರಸಭೆ ಸದಸ್ಯ ಅಬ್ದುಲ್‍ರೌಫ್ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!