ಗುರುಗುಂಟಾ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾರ್ಯ : ವಿದ್ಯುತ್ ಕಡಿತ
ಲಿಂಗಸುಗೂರು : ತಾಲೂಕಿನ ಗುರುಗುಂಟ ಗ್ರಾಮದ 110 ಕೆ.ವಿ. ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವುದರಿಂದ ಫೆ.1 ಸೋಮವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ವಿದ್ಯುತ್ ಕಡಿತವಾಗಲಿದೆÉ ಎಂದು ಜೆಸ್ಕಾಂ ಎಇಇ ಬಸವರಾಜ ಚೌಹಾಣ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಗುರುಗುಂಟ ಉಪಕೇಂದ್ರ ವ್ಯಾಪ್ತಿಯ ಅಮರೇಶ್ವರ, ರಾಯದರ್ಗ, ಗುರುಗುಂಟ, ಗೌಡೂರು, ರಾಮತೀರ್ಥ ಮತ್ತು ಟಣಮನಕಲ್ ಫೀಡರ್‍ಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ.

