ಹೆಚ್‍ಡಿಕೆ ಹುಟ್ಟುಹಬ್ಬ : ಹಾಲು-ಹಣ್ಣು ವಿತರಣೆ
ಲಿಂಗಸುಗೂರು : ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬರ ನಿಮಿತ್ಯ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರು ಹಾಲು-ಹಣ್ಣು ವಿತರಣೆ ಮಾಡಿದರು.
ಜೆಡಿಎಸ್ ತನ್ನ ಆಡಳಿತಾವಧಿಯಲ್ಲಿ ರಾಜ್ಯದ ರೈತರ, ಬಡವರ ಹಿತದೃಷ್ಠಿಯಿಂದ ಹತ್ತಾರು ಯೋಜನೆಗಳನ್ನು ಜಾರಿಮಾಡಿ ಜನಮಾನಸದಲ್ಲಿ ನೆಲೆಯೂರಿದೆ. ಬಡವರ ಬಂಧುವಾಗಿರುವ ಕುಮಾರಣ್ಣನವರ ಸೇವೆ ನಾಡಿಗೆ ಅಗತ್ಯವಾಗಿದೆ. ದೇವರು ಅವರಿಗೆ ಹೆಚ್ಚಿನ ಆಯುರಾರೋಗ್ಯ ಭಾಗ್ಯ ಕರುಣಿಸಲೆಂದು ಕಾರ್ಯಕರ್ತರು ಹಾರೈಸಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸಿದ್ದು ಬಡಿಗೇರ್, ಮುಖಂಡರಾದ ಯಮನೂರ, ಕೆ.ನಾಗಭೂಷಣ, ಪರಶುರಾಮ ಕೆಂಭಾವಿ, ವಿಜಯ ಪೂಜಾರಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

