ಮಹಿಳೆ ಕಾಣೆ : ಪತ್ತೆಗೆ ಸಹಕರಿಸಿ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ
ಶಾರದಮ್ಮ (50) ಎನ್ನುವ ಮಹಿಳೆ ಮನೆಯಿಂದ ಕಾಣೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ಸ್ಥಳೀಯ ಪೋಲಿಸ್‍ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು,ಮಹಿಳೆಯು ಮಾರ್ಚ್ 29ರಂದು ಬೆಳಗ್ಗೆ 8 ಗಂಟೆಯಿಂದ ಕಾಣೆಯಾಗಿದ್ದು,ಗೋದಿ ಮೈಬಣ್ಣ, ಗಿಡ್ಡನೆಯ ದಪ್ಪ ದೇಹದಾರ್ಡತೆ ಹೊಂದಿದ್ದಾರೆ.ದುಂಡು ಮುಖ, ಐದು ಅಡಿ ಎತ್ತರ ಇರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಲಿಂಗಸುಗೂರು ಪಿಎಸ್‍ಐ
ಮೊಬೈಲ್ ಸಂಖ್ಯೆ 9480803854 ಗೆ ಕರೆ ಮಾಡಲು ಕೋರಲಾಗಿದೆ.

