ರಾಯಚೂರು

ಲಿಂಗಸುಗೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಬೀದಿ ವ್ಯಾಪಾರಿಗಳ ಆಗ್ರಹ

ಲಿಂಗಸುಗೂರು : ಬೀದಿಬದಿ ವ್ಯಾಪಾರಿಗಳು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರಿಗೆ ಮನವಿ
ಸಲ್ಲಿಸಿದರು.

ವ್ಯಾಪಾರದ ವಲಯ, ಆಹಾರ ಪದಾರ್ಥಗಳ ವಲಯ, ಹೂ, ಹಣ್ಣು,ತರಕಾರಿ, ಫುಟ್ವೇರ್, ಹೊಲಿಗೆ ಸಾಮಗ್ರಿ,ಹ್ಯಾಂಡ್‍ಕ್ರಾಫ್ಟ್ಸ್ ಸೇರಿ ಇತರೆ
ವ್ಯಾಪಾರಿಗಳಿಗೆ ಪ್ರತ್ಯೇಕಿಸಿ ಮಹಿಳೆಯರ ಗುಂಪುಗಳಿಗೆ ವ್ಯಾಪಾರ ಮಾಡಲು ಪ್ರತ್ಯೇಕವಾಗಿ ವಲಯವನ್ನು ಗುರುತು ಮಾಡಿಕೊಡಬೇಕು.ವ್ಯಾಪಾರಿ ಮಹಿಳೆಯರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು. ಮಹಿಳೆಯರ ಅನುಕೂಲಕ್ಕಾಗಿ ಮೇಲ್ಛಾವಣಿ, ಲೇಟ್ಸ್,
ನೀರು, ಶೌಚಾಲಯ ಹಾಗೂ ಸಂಗ್ರಹಣ ಘಟಕಗಳನ್ನು
ಮಾಡಿಕೊಡಬೇಕು. ಮಹಿಳೆಯರು ಉತ್ಪನ್ನ ಮಾಡುವ
ಪದಾರ್ಥಗಳನ್ನು ಪಟ್ಟಣ ಮಾರುಕಟ್ಟೆ ಸಮಿತಿಯಿಂದ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು. ಎಸ್.ಸಿ., ಎಸ್.ಟಿ. ಫಲಾನುಭವಿಗಳಿಗೆ ಬರುವ
ಅನುದಾನದಿಂದ ಪ್ರತ್ಯೇಕ ವೆಂಡಿಂಗ್ ಜೋನ್ ಮಾಡಬೇಕು.

ವಿಕಲ ಚೇತನರಿಗೆ ಪ್ರತ್ಯೇಕ ವೆಂಡಿಂಗ್ ಜೋನ್
ಮಾಡಿಕೊಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವೆಂಡಿಂಗ್ ಜೋನ್ ಮಾಡಿಕೊಡಬೇಕು. ದೇವರಾಜು ಅರಸು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮ, ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ
ಅಭಿವೃದ್ಧಿ ನಿಗಮದಿಂದ ಬರುವ ಹಣದಿಂದ ಎರಡು ವೆಂಡಿಂಗ್ ಜೋನ್ ರಚನೆ ಮಾಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ವಿದ್ಯಾಭ್ಯಾಸ, ಪುಸ್ತಕ, ವಸ್ತ್ರ ಇನ್ನಿತರ ಸವಲತ್ತುಗಳನ್ನು ನೀಡಬೇಕು. ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಇಲ್ಲದವರಿಗೆ ವಸತಿ
ನೀಡಬೇಕು. ರಸ್ತೆ ಬದಿ ವ್ಯಾಪಾರಿಗಳಿಗೆ ಕಾರ್ಮಿಕ ಇಲಾಖೆಯಿಂದ ಕೂಲಿ ಕಾರ್ಮಿಕರ ಗುರುತಿನ ಚೀಟಿ ನೀಡಬೇಕು. ಡೇ ನಲ್ಮ್ ಟಿಯಲಲಿ ಬರುವ
ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಪ್ರಧನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿಯ ಯೋಜನೆಯಡಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಹಾಗೂ ಮಹಿಳೆಯರ ಎಸ್.ಹೆಚ್.ಜಿ.
ಗುಂಪುಗಳಿಗೆ ಡಿಜಿಟಲ್ ವಹಿವಾಟು ಬಗ್ಗೆ ತರಬೇತಿಯನ್ನು ಆಯೋಜಿಸಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಂಘಟನೆ ಅದ್ಯಕ್ಷ ಮಹೆಬೂಬಪಾಷಾ, ಪ್ರಧಾನ ಕಾರ್ಯದರ್ಶಿ ಶರಣಬಸವ, ಬಸವರಾಜ ತಾತಾ, ಮಹಾಂತೇಶ, ಮಹ್ಮದ್ ಮನಿಯಾರ್,ಕೇಶವರಾಜ್, ಪಂಪಣ್ಣ ಹೂಗಾರ, ಅಮರೇಶ ಸೇರಿ ಇತರರು ಈ
ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!