ಪೈದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ : ಕ್ರಮಕ್ಕೆ ಆಗ್ರಹ
ಲಿಂಗಸುಗೂರು : ತಾಲೂಕಿನ ಪೈದೊಡ್ಡಿ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು,ಕೂಡಲೇ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕನ್ನಡ
ಸೇನೆ ಕರ್ನಾಟಕ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು,ಪೈದೊಡ್ಡಿ ಪಂಚಾಯಿತಿಯಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 70,88,100 ರೂಪಾಯಿಗಳಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದುಕೊಂಡಿದ್ದು, ಸದರಿ ಕ್ರಿಯಾ ಯೋಜನೆಯಲ್ಲಿನ
ಕಾಮಗಾರಿಗಳನ್ನು ನಿರ್ವಹಿಸದೇ ತಮಗಿಚ್ಛೆ ಬಂದಹಾಗೆ ವಿವಿಧ ಅಂಗಡಿಯ ಮಾಲೀಕರ ಹೆಸರುಗಳಿಗೆ ಹಣವನ್ನು ಜಮೆ ಮಾಡಿ ಅವ್ಯವಹಾರ ಎಸಗಿರುತ್ತಾರೆ. ಈ-ಗ್ರಾಮ ಸ್ವರಾಜ್ ಮುಖಾಂತರ ಕಂಡುಬಂದಿದ್ದು ಸರಕಾರದ ಮಾರ್ಗಸೂಚಿಗಳನ್ನು ಮತ್ತು ನಿಯಮಗಳನ್ನು
ಗಾಳಿಗೆ ತೂರಲಾಗಿದೆ. ಕೂಡಲೇ ಪರಿಶೀಲನೆ ಮಾಡಿ ಪಂಚಾಯಿತಿ ಪಿಡಿಒ ಅವರನ್ನು ಅಮಾನತ್ತುಗೊಳಿಸಬೇಕು. ಸರಕಾರದ ಬೊಕ್ಕಸದ ಹಣವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು.
ಲಿಂಗಸುಗೂರು ಪಟ್ಟಣದ ಮಹೆಬೂಬ ಎಲೆಕ್ಟ್ರಿಕಲ್ 17,00,250 ರೂಪಾಯಿ, ಅಮೃತ ಎಂಟರ್‍ಪ್ರೈಸಸ್ 3,35,680 ರೂಪಾಯಿ, ವೇದಾ ಎಂಟರ್‍ಪ್ರೈಸಸ್ 1,40,140 ರೂಪಾಯಿ, ಎಮ್.ಎ. ಎಂಟರ್‍ಪ್ರೈಸಸ್ 1,63,750
ರೂಪಾಯಿ, ಗುರುಗುಂಟಾ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ
ಎಂಟರ್‍ಪ್ರೈಸಸ್ 3,84,224 ರೂಪಾಯಿ, ಅನೂಷಾ ಬುಕ್‍ಸ್ಟಾಲ್ 1,82,400 ರೂಪಾಯಿ,ಹಟ್ಟಿ ಪಟ್ಟಣದ ಮಂಜು ಎಲೆಕ್ಟ್ರಿಕಲ್ಸ್ 1,68,750 ರೂಪಾಯಿ ಸೇರಿ ಏಪ್ರಿಲ್ 1, 2020 ರಿಂದ ಮಾರ್ಚ್ 31, 2021ರ ವರೆಗೆ ಒಟ್ಟು 30,75,194 ರೂಪಾಯಿಗಳ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಕೂಡಲೇ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ
ಮುಂದಾಗಬೇಕೆಂದು ಒತ್ತಾಯಿಸಿದರು.
ಸಂಘಟನೆ ಅದ್ಯಕ್ಷ ಶರಣೋಜಿ ಪವಾರ್, ಶಿವು ಕೆಂಪು, ರಾಮ ಜೆಟ್ಟಿ,
ಯಂಕೋಬ, ಬಸವ, ಅಮರೇಶ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

