ರಾಯಚೂರು

ರಾಜ್ಯಕ್ಕೇ ಮಾದರಿಯಾದ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಸಾರಿಗೆ ಸಂಧಾನ ಲಿಂಗಸುಗೂರಲ್ಲಿ ಸಾರಿಗೆ ಸಂಚಾರ ಆರಂಭ..!

ವರದಿ:ಖಾಜಾಹುಸೇನ್
ಲಿಂಗಸುಗೂರು : ಕಳೆದ 10 ದಿನಗಳಿಂದ ರಾಜ್ಯದಲ್ಲಿ ನಡೆದಿರುವ ಸಾರಿಗೆ ನೌಕರರ ಮುಷ್ಕರ ಇನ್ನೇನು ತಹಬಂದಿಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವ ಹೊತ್ತಲೇ ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಕಾಳಜಿಯುತ ಸಂಧಾನ ಇಡೀ ರಾಜ್ಯವೇ ತಿರುಗಿ ನೋಡುವಂತೆ
ಮಾಡಿದೆ. ಸಾರಿಗೆ ನೌಕರರನ್ನು ಓಲೈಸಿದ ಪರಿಣಾಮ ಲಿಂಗಸುಗೂರಲ್ಲಿ ಶನಿವಾರದಿಂದ ಬಸ್‍ಗಳ ಸೇವೆ ಆರಂಭಗೊಂಡಿದೆ.

ಮಾನಪ್ಪ ವಜ್ಜಲ್‍ರ ನಿವಾಸಕ್ಕೆ ಭೇಟಿ ನೀಡಿದ್ದ ಸಾರಿಗೆ ನೌಕರರ ಸಮಸ್ಯೆಗಳನ್ನು ಆಲಿಸಿದ ಬಳಿಕ ನೇರವಾಗಿ ಸಾರಿಗೆ ಸಚಿವರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಮನವೊಲಿಸಿದರು. ಮಾನಪ್ಪರ ಮಾತಿಗೆ ಒಪ್ಪಿದ ಸಾರಿಗೆ ಸಚಿವರು, ಮೊದಲು ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗಲಿ ಶೀಘ್ರದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ಸಿಬ್ಬಂಧಿಗಳಿಗೆ ಶುಭ ಸುದ್ದಿ ನೀಡೋಣ ಎಂದು ಹೇಳಿದರೆಂದು ತಿಳಿದುಬಂದಿದೆ.

ಸಾರಿಗೆ ಸಿಬ್ಬಂಧಿಗಳಿಗೆ ನೋಟೀಸ್ ನೀಡಿರುವುದು, ಬೇರೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಸೇರಿ ಇತರೆ ಸಮಸ್ಯೆಗಳನ್ನು ನೌಕರರು ಚಿನ್ನದಗಣಿ ಅದ್ಯಕ್ಷರ ಬಳಿ ಹೇಳಿಕೊಂಡರು. ಇದಕ್ಕೆ ಸ್ಪಂಧಿಸಿದ ವಜ್ಜಲ್ ಕೂಡಲೇ ಕೆಲಸಕ್ಕೆ ಹಾಜರಾಗಿ, ಎಲ್ಲವನ್ನೂ ಸರಿಪಡಿಸುತ್ತೇನೆಂದು ಭರವಸೆ ನೀಡಿದರು. ಇದಕ್ಕೆ ಸಮ್ಮತಿಸಿದ ಸಿಬ್ಬಂಧಿಗಳು ಶನಿವಾರ ಬೆಳಗ್ಗೆ
ಕರ್ತವ್ಯಕ್ಕೆ ಹಾಜರಾಗಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸಲು ಮುಂದಾದರು.ಮಾಜಿ ಶಾಸಕರಾಗಿದ್ದರೂ ಮಾನಪ್ಪ ವಜ್ಜಲ್ ಅವರು,ಮಾನವೀಯತೆ, ಸಾಮಾಜಿಕ ಕಳಕಳಿಯ ಹಿತ ದೃಷ್ಠಿಯಿಂದ ಸಾರಿಗೆ ನೌಕರರ ಸಮಸ್ಯೆಗಳತ್ತ ಗಮನ ಹರಿಸಿ, ಅವರ ಸಂಕಷ್ಟಕ್ಕೆ
ಬೆನ್ನೆಲುಬಾಗಿ ನಿಂತು ಸಹಾಯಕ್ಕೆ ಮುಂದಾಗಿರುವ ಕಾರ್ಯ ಮಾದರಿಯಾಗಿದೆ.ರಾಜ್ಯದ ಇತರೆಡೆಗಳಲ್ಲಿ ಇರುವ ಪ್ರತಿನಿಧಿಗಳಿಗೆ ಮಾನಪ್ಪ ವಜ್ಜಲ್‍ರ ಕಾರ್ಯ ಅನುಕರಣೀಯವಾಗಿದೆ.

ಇನ್ನಾದರೂ ಸಂಬಂಧಿಸಿದ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿನ ಸಾರಿಗೆ ಸಿಬ್ಬಂಧಿಗಳ ಸಂಕಷ್ಟಕ್ಕೆ
ನೆರವಾಗುವ ಮೂಲಕ ಸರಕಾರದ ಮೇಲೆ ಒತ್ತಡ ಹೇರಿ, ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕೆನ್ನುವ ಕೂಗು ಕೇಳಿ ಬರುತ್ತಿವೆ. ರಾಜ್ಯಕ್ಕೇ ಮಾದರಿಯಾಗಿರುವ ಮಾನಪ್ಪ ವಜ್ಜಲ್‍ರ ರಾಜಿ ಸಂಧಾನ ಕಾರ್ಯಕ್ಕೆ ಶ್ಲಾಘನೆಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
‘ಸಾರಿಗೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಶೀಘ್ರ
ಮುಂದಾಗಲಿದೆ.

ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ದೂರವಾಣಿ ಮೂಲಕ
ಮಾತನಾಡಿ ಬೇಡಿಕೆಗಳ ಈಡೇರಿಕೆಗೆ ವಿನಂತಿಸಿದ್ದೇನೆ. ತ್ವರಿತವಾಗಿ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂಧಿಸುವ ಭರವಸೆ ಸಚಿವರು ನೀಡಿದ್ದಾರೆ.ಜೊತೆಗೆ ಸಣ್ಣ-ಪುಟ್ಟ ಸಮಸ್ಯೆಗಳನ್ನೂ ನಿವಾರಿಸುವುದಾಗಿ ಮಾತು
ಕೊಟ್ಟಿದ್ದಾರೆ. ಇದರಿಂದ ಸಂತೃಪ್ತರಾದ ಸಾರಿಗೆ ಸಿಬ್ಬಂಧಿ ಸಹೋದರರು ಕೆಲಸಕ್ಕೆ ಹಾಜರಾಗಿದ್ದಾರೆ. ರಾಜ್ಯದ ವಿವಿದೆಡೆಗಳಲ್ಲೂ ಸಾರಿಗೆ ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗಿ ಪ್ರಯಾಣಿಕರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಕೊನೆ ಹಾಡಬೇಕೆಂದು ವಿನಂತಿಸುತ್ತೇನೆ.’ _ ಮಾನಪ್ಪ
ವಜ್ಜಲ್, ಹಟ್ಟಿ ಚಿನ್ನದಗಣಿ ಅದ್ಯಕ್ಷರು.

ಸಾರಿಗೆ ಮುಷ್ಕರದಿಂದ ಆದಾಯ ನಿಂತುಹೋಗಿದೆ. ಖಾಸಗಿಯವರ ಹೆಚ್ಚನ ದರದ ಸಂಚಾರ ಪ್ರಯಾಣಿಕರ ಮೇಲೆ ಹೊರೆಯಾಗುತ್ತಿದೆ. ನಮ್ಮ ಕೆಲ ಸಿಬ್ಬಂಧಿಗಳು ಮಾಜಿ ಶಾಸಕ ಮಾನಪ್ಪ ವಜ್ಜಲ್‍ರ ಬಳಿಗೆ ತೆರಳಿ ತಮ್ಮ ನೋವನ್ನು
ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂಧಿಸಿದ ಹಟ್ಟಿಚಿನ್ನದಗಣಿ ಅದ್ಯಕ್ಷರೂ ಆಗಿರುವ ಮಾಜಿ ಶಾಸಕ ವಜ್ಜಲ್ ಸಾಹೇಬರು ಸಾರಿಗೆ ಸಚಿವರೊಂದಿಗೆ ಮಾತನಾಡಿ ಸಮಸ್ಯೆಗಳ ಇತ್ಯರ್ಥಕ್ಕೆ ಭರವಸೆ ನೀಡಿದ್ದಾರೆ. ಪರಿಣಾಮ ಇಂದಿನಿಂದ ಕೆಲ ರೂಟ್‍ಗಳು ಆರಂಭಿಸಲಾಗಿದೆ. ಸ್ವಯಂಪ್ರೇರಿತರಾಗಿ
ಸಿಬ್ಬಂಧಿಗಳು ಕೆಲಸಕ್ಕೆ ಹಾಜರಾಗುತ್ತಿರುವುದು ಸ್ವಾಗತಾರ್ಹ.’ –
ಆದಪ್ಪ, ಸಾರಿಗೆ ಅಧಿಕಾರಿ

Leave a Reply

Your email address will not be published. Required fields are marked *

error: Content is protected !!