ವಾಜಪೇಯಿ ಜನ್ಮದಿನಾಚರಣೆ
ಲಿಂಗಸುಗೂರು : ಸ್ಥಳೀಯ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಲ್ಲಿ ಭಾರತ ರತ್ನ, ಅಜಾತಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ಯವರ 96 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಹಟ್ಟಿ ಚಿನ್ನದ ಗಣಿ ಕಂಪನಿಯ ಅಧ್ಯಕ್ಷ
ಮಾನಪ್ಪ ಡಿ ವಜ್ಜಲ್ ರವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪಕ್ಷದ ಅಧ್ಯಕ್ಷ ವೀರನಗೌಡ ಪಾಟೀಲ್, ಪುರಸಭೆ ಸದಸ್ಯ ಮುದುಕಪ್ಪ ನಾಯಕ, ಮುಖಂಡರಾದ ಡಾ. ಶಿವಬಸಪ್ಪ, ಹುಲ್ಲೇಶ ಸಾಹುಕಾರ್, ಪ್ರಭು ಸ್ವಾಮಿ ಅತ್ತನೂರ, ಸಿದ್ದರಾಮಯ್ಯ ಸ್ವಾಮಿ, ಭೀಮಣ್ಣ ಹಿರೇಮನಿ, ರುದ್ರಗೌಡ ಪಾಟೀಲ್, ಶಂಕರ ಚವ್ಹಾಣ, ಜಗನ್ನಾಥ ಕುಲಕರ್ಣಿ, ರಾಮನಗೌಡ ನಾಗರಾಹಾಳ, ರವಿಗೌಡ ಹಾಲಭಾವಿ, ಚನ್ನಬಸವ ಹಿರೇಮಠ ಸೇರೆ ಇತರರು ಇದ್ದರು.

