ರಾಯಚೂರು

ಯರಡೋಣ ಗ್ರಾಮಕ್ಕೆ ಅಂಗನವಾಡಿ ಮಂಜೂರು ಮಾಡಲು ಒತ್ತಾಯ

ಲಿಂಗಸುಗೂರು : ತಾಲೂಕಿನ ಯರಡೋಣ ಗ್ರಾಮದ ದಲಿತಕೇರಿಗೆ ಹೊಸತಾಗಿ ಅಂಗನವಾಡಿ ಕೇಂದ್ರವನ್ನು ಮಂಜೂರು ಮಾಡಬೇಕೆಂದು ದಲಿತ ಕೇರಿ ನಿವಾಸಿಗಳು ಒತ್ತಾಯಿಸಿದರು.


ಸಿಡಿಪಿಓ ಶರಣಮ್ಮರಿಗೆ ಮನವಿ ಸಲ್ಲಿಸಿದ ಅವರು, ಹೊನ್ನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಲಿತಕೇರಿಯಲ್ಲಿ ಸುಮಾರು 500 ಜನಸಂಖ್ಯೆ ವಾಸಿಸುತ್ತಿದ್ದಾರೆ. ಆದರೆ, ದಲಿತಕೇರಿಯಲ್ಲಿ ಒಂದೂ ಅಂಗನವಾಡಿ ಕೇಂದ್ರವಿಲ್ಲ. ಈಗಾಗಲೇ ಗ್ರಾಮದಲ್ಲಿ ಮೂರು ಕೇಂದ್ರಗಳಿದ್ದು, ದಲಿತಕೇರಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಪರಿಶೀಲನೆ ಮಾಡಿ ಹೊಸತಾಗಿ ಅಂಗನವಾಡಿ ಕೇಂದ್ರವನ್ನು ಮಂಜುರು ಮಾಡಬೇಕೆಂದು ಒತ್ತಾಯಿಸಿದರು.


ದಲಿತ ಮುಖಂಡರಾದ ನಿಂಗಪ್ಪ, ಹನುಮಂತ, ಶ್ರೀನಿವಾಸ, ದುರುಗಪ್ಪ, ಹುಸೇನಪ್ಪ, ಶಿವಪ್ಪ, ರಂಗಪ್ಪ, ರವಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!