ಪಕ್ಷನಿಷ್ಠರಿಗೆ ಉಡಿತುಂಬಿದ ಬಿಜೆಪಿ ಕಾರ್ಯಕರ್ತೆಯರು
ಲಿಂಗಸುಗೂರು : ದಶಕಗಳಿಂದ ಪಕ್ಷದ ಸಂಘಟನೆ ಹಾಗೂ ಪಕ್ಷದ
ತತ್ವಸಿದ್ಧಾಂತಗಳಡಿ ಸೇವೆ ಸಲ್ಲಿಸಿದ ಪಕ್ಷನಿಷ್ಠ ಹಿರಿಯ ಮಹಿಳಾ
ಕಾರ್ಯಕರ್ತೆಯರಿಗೆ ಬಿಜೆಪಿ ಪಕ್ಷದ ಮಹಿಳಾ ಮುಖಂಡರು ಉಡಿ ತುಂಬುವ ಮೂಲಕ ಅವರ ಕಾರ್ಯವನ್ನು ಶ್ಲಾಘಿಸಿದರು.
ಪಕ್ಷದ ರಾಜ್ಯ ಮುಖಂಡರ ಸೂಚನೆ ಹಿನ್ನೆಲೆಯಲ್ಲಿ ತಾಲೂಕಿನ
ಹಿರಿಯ ಕಾರ್ಯಕರ್ತೆಯಾಗಿರುವ ಶೋಭಾ ಕಾಟವಾ ಅವರನ್ನು
ಮುಖಂಡರಾದ ಜ್ಯೋತಿ ಸುಂಕದ್, ಸ್ಮೀತಾ ಅಂಗಡಿ, ಸುಮಾ ರೋಹಿಣಿ ಉಡಿತುಂಬುವ ಜೊತೆಗೆ ಸನ್ಮಾನಿಸಿ ಗೌರವಿಸಿದರು. ಬರುವ ದಿನಗಳಲ್ಲಿ ಹಂತಹಂತವಾಗಿ ಪಕ್ಷನಿಷ್ಠ ಕಾರ್ಯಕರ್ತೆಯರಿಗೆ ಹಿರಿಯರ ಸೂಚನೆಯಂತೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಸ್ಮೀತಾ ತಿಳಿಸಿದ್ದಾರೆ.

