ಲಿಂಗಸುಗೂರು ಪುರಸಭೆ : 5.21 ಲಕ್ಷ ರೂ. ಉಳಿತಾಯ ಬಜೆಟ್
ಲಿಂಗಸುಗೂರು : ಸ್ಥಳೀಯ ಪುರಸಭೆಯ 2021-22 ನೇ ಸಾಲಿನಲ್ಲಿ 5,21,766 ರೂಪಾಯಿ ಉಳಿತಾಯ ಬಜೆಟ್‍ಅನ್ನು ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಮಂಡಿಸಿದರು.
ಗುರುವಾರ ಪುರಸಭೆಯ ಸಭಾಂಗಣದಲ್ಲಿ ಕರೆದಿದ್ದ ಬಜೆಟ್ ಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಣೆ ಮಾಡಿದ ಮುಖ್ಯಾಧಿಕಾರಿಗಳು ಸಭೆಯ ಅನುಮೋದನೆಗೆ ಒಪ್ಪಿಸಿದರು. ಆಗ ಮುಖ್ಯಾಧಿಕಾರಿಗಳ ವರ್ತನೆಗೆ ಅಧ್ಯಕ್ಷ-ಉಪಾಧ್ಯಕ್ಷರಾದಿಯಾಗಿ ಕೆಲ ಸದಸ್ಯರು ಅಸಮಧಾನ ವ್ಯಕ್ತಪಡಿಸಿದರು.
ಪಟ್ಟಣದ ಅಭಿವೃದ್ಧಿಗೆ ಮುಖ್ಯಾಧಿಕಾರಿಗಳು ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪುರಸಭೆ ಮಳಿಗೆಗಳ ಬಾಡಿಗೆ, ಕರ ವಸೂಲಿ ನಿಯಮಿತವಾಗಿ ಆಗುತ್ತಿಲ್ಲ. ಸಿಬ್ಬಂಧಿಗಳೂ ಸದಸ್ಯರ ಮಾತಿಗೆ ಬೆಲೆ ಕೊಡುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳು ತಿಂಗಳುಗಟ್ಟಲೇ ವಿಳಂಬವಾಗುತ್ತಿವೆ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದರೂ, ಯಾವುದಕ್ಕೂ ಮುಖ್ಯಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂಧಿಸುತ್ತಿಲ್ಲವೆಂದು ಸದಸ್ಯರುಗಳು ಮುಖ್ಯಾಧಿಕಾರಿ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಸಭೆಯ ಅದ್ಯಕ್ಷತೆಯನ್ನು ಪುರಸಭೆ ಅದ್ಯಕ್ಷೆ ಗದ್ದೆಮ್ಮಾ ಬೋವಿ ವಹಿಸಿದ್ದರು. ಉಪಾದ್ಯಕ್ಷ ಮಹ್ಮದ್ ರಫಿ, ಸ್ಥಾಯಿಸಮಿತಿ ಅದ್ಯಕ್ಷ ಪ್ರಮೋದ ಕುಲಕರ್ಣಿ, ಸದಸ್ಯರಾದ ಯಮನಪ್ಪ ದೇಗಲಮಡಿ, ಬಾಬುರೆಡ್ಡಿ ಮುನ್ನೂರು, ರುದ್ರಪ್ಪ ಬ್ಯಾಗಿ, ಮುದುಕಪ್ಪ ನಾಯಕ, ಬಸವರಾಜ, ದೊಡ್ಡನಗೌಡ ಹೊಸಮನಿ, ಚನ್ನಬಸವ ಹಿರೇಮಠ, ಮೌಲಾಸಾಬ ಗೌಳಿ ಸೇರಿ ಮಹಿಳಾ ಸದಸ್ಯರು ಹಾಗೂ ಸಿಬ್ಬಂಧಿಗಳು ಸಭೆಯಲ್ಲಿ ಇದ್ದರು.

