ರಾಯಚೂರು

ರಾಜ್ಯ-ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೋಗಿದ ಕರವೇ ಕಾರ್ಯಕರ್ತರು ಗ್ಯಾಸ್ ಸಿಲೆಂಡರ್, ಮೋಟಾರ್ ಬೈಕ್ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ

ಲಿಂಗಸುಗೂರು : ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಅಗತ್ಯ ದಿನಗಳಕೆಯ ವಸ್ತುಗಳ ಬೆಲೆ ಪದೇ ಪದೇ ಏರಿಕೆ ಆಗುತ್ತಲೇ ಇದೆ.ಇದರಿಂದ ಜನಸಾಮಾನ್ಯರು ಬದುಕು ಸಾಗಿಸುವುದು ಕಷ್ಟಕರವಾಗುತ್ತಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಣ್ಣಾಯಿಸದೇ ಇರುವುದು
ಬಡವರ, ಜನಸಾಮಾನ್ಯರ ಜೀವನ ಸಾಗಿಸುವುದು ಸಂಕಷ್ಟಕರವಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಗ್ಯಾಸ್ ಸಿಲೆಂಡರ್ ಹಾಗೂ ಮೋಟರ್ ಬೈಕ್‍ಗಳ ಮೆರವಣಿಗೆ ಮಾಡುವ
ಮೂಲಕ ಪ್ರತಿಭಟನೆ ಮಾಡಿದರು.

ಪಟ್ಟಣದ ಕರವೇ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮಾಡಿದ ಕಾರ್ಯಕರ್ತರು ಬಸ್ಟಾಂಡ್ ವೃತ್ತದಲ್ಲಿ ಪ್ರತಿಕೃತಿ ದಹನ ಮಾಡಿದರು.ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ,ಲಾಕ್‍ಡೌನ್ ಸಡಿಲಿಕೆ ಆದಾಗಿನಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ
ಬಡವರು, ಕೂಲಿಕಾರ್ಮಿಕರು, ಮಧ್ಯಮವರ್ಗದವರು ಬೆಲೆ ಏರಿಕೆ ಶಾಕ್ನಿಂದ ಕಂಗೆಟ್ಟಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಬೈಕ್‍ಗಳಲ್ಲೇ ಕೂಲಿಕಾರ್ಮಿಕರು ಕೆಲಸಕ್ಕೆ ತೆರಳುತ್ತಾರೆ. ಪ್ರತಿನಿತ್ಯ ಪೆಟ್ರೋಲ್ ದರ ಹೆಚ್ಚಳವಾಗುತ್ತಲೇ ಇರುವ ಪರಿಣಾಮ ಕಾರ್ಮಿಕರಿಗೆ ಬರುವ ಸಂಬಳವೆಲ್ಲಾ ಪೆಟ್ರೋಲ್‍ಗೆ ಖರ್ಚು
ಮಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗುತ್ತಿದೆ.

ಬಡವರು, ಕೂಲಿಕಾರ್ಮಿಕರ ಜೀವನ ಮಟ್ಟ ಸುಧಾರಿಸಲು ಸರಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಭಾಷಣಗಳಲ್ಲೇ ಹೇಳುತ್ತಾರೆಯೇ ವಿನಃ, ವಾಸ್ತವಿಕವಾಗಿ ಬದುಕು ಘನಘೋರವಾಗಿದೆ.ಸ್ಥಳೀಯ ಮಟ್ಟದಲ್ಲಿ ಬಡವರಿಗೆ, ಕೂಲಿಕಾರ್ಮಿಕರಿಗೆ ಸಕಾಲಕ್ಕೆ ಕೆಲಸ
ಸಿಗದೇ ಜೀವನ ನಿರ್ವಹಣೆಗೆ ಪರ್ಯಸನ ಪಡುವಂತಾಗಿದೆ. ನಿತ್ಯ ಏರಿಕೆಯಾಗುತ್ತಿರುವ ತೈಲ, ಅನಿಲ ಹಾಗೂ ಅಗತ್ಯವಸ್ತುಗಳ ಬೆಲೆಗಳನ್ನು ತಗ್ಗಿಸಿ, ಬಡವರ ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ತಾವುಗಳು ತಾಕೀತು ಮಾಡಬೇಕು. ಪರಿಸ್ಥಿತಿ ಹೀಗೆಯೇ ಮುಂದವರೆದರೆ ಬಡವರ ಬದುಕು ಬೀದಿಗೆ ಬರುವುದರಲ್ಲಿ
ಎರಡು ಮಾತಿಲ್ಲಾ. ಕೂಡಲೇ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿ ದರ ಏರಿಕೆಗೆ ಕಡಿವಾಣ ಹಾಕಿಸಬೇಕು.

ಈ ಮೂಲಕ ಜನಸಾಮಾನ್ಯರ ಪಾಲಿಗೆ ಸರಕಾರ
ನೆರವಿಗೆ ಬರುತ್ತಿದೆ ಎನ್ನುವ ಕಾಳಜಿ ಮೂಡಿಸಬೇಕೆಂದು ಆಗ್ರಹಿಸಿದರು.ಕರವೇ ಅದ್ಯಕ್ಷ ಜಿಲಾನಿಪಾಷಾ, ಪ್ರದಾನ ಕಾರ್ಯದರ್ಶಿ ಶಿವರಾಜ ನಾಯಕ್,ನಗರ ಘಟಕ ಅದ್ಯಕ್ಷ ಹನುಮಂತ ನಾಯಕ, ಉಪಾದ್ಯಕ್ಷ ಚಂದ್ರು ನಾಯಕ, ಖಜಾಂಚಿ ಅಜೀಜಪಾಷಾ, ಮುಖಂಡರಾದ ರವಿಕುಮಾರ ಬರಗೂಡಿ,ನಿರುಪಾದಿ ಹಿರೇಮಠ, ಜಮೀರ್‍ಖಾನ್, ಇರ್ಫಾನ್ ಖುರೇಶಿ, ಮಹ್ಮದ್ ಆರಿಫ್,ಅಮರೇಶ, ಅಲ್ಲಾವುದ್ದೀನ್, ಇಲಿಯಾಸ್ ಸೇರಿದಂತೆ ಸರ್ಜಾಪೂರ, ಕಾಳಾಪೂರ,
ಹಟ್ಟಿ, ಚಿತ್ತಾಪೂರ, ಆನಾಹೊಸೂರು, ರೋಡಲಬಂಡಾ, ಗುಡದನಾಳ,ಯಲಗಲದಿನ್ನಿ ಗ್ರಾಮ ಘಟಕಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!