ಲಿಂಗಸುಗೂರು ಪುರಸಭೆಯಲ್ಲಿ ಸಾಮಾನ್ಯ ಸಭೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಲು ಒಮ್ಮತದ ನಿರ್ಧಾರ
ಲಿಂಗಸುಗೂರು : ಅಧಿಕಾರಕ್ಕೆ ಬಂದಾಗಿನಿಂದ ಪುರಸಭೆ ವ್ಯಾಪ್ತಿಯ ಹಲವು ವಾರ್ಡ್‍ಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳು ಉಲ್ಬಣಗೊಳ್ಳುತ್ತಲೇ ಇವೆ.ಇದಕ್ಕೆ ಸಮರ್ಪಕವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಇನ್ಮುಂದೆ ಪರಸ್ಪರ ಸಹಕಾರದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಸಕಾಲದಲ್ಲಿಯೇ ಸ್ಪಂಧಿಸಲು ಸ್ಥಳೀಯ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಧಾರ ಮಾಡಲಾಯಿತು.
ಪುರಸಭೆ ಅದ್ಯಕ್ಷೆ ಗದ್ದೆಮ್ಮಾ ಭೋವಿಯವರ ಅದ್ಯಕ್ಷತೆಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ನರಸಪ್ಪ ತಶಿಲ್ದಾರ್, ನಾನು ಹೊಸತಾಗಿ ಬಂದಿದ್ದೇನೆ.
ಸಾಧ್ಯವಾದಷ್ಟು ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು
ಪ್ರಯತ್ನಿಸುತ್ತಿದ್ದೇನೆ. ನಾನು ಬರುವುದಕ್ಕಿಂತ ಮುಂಚೆ ಬಹಳಷ್ಟು
ಕೆಲಸಗಳು ಬಾಕಿ ಇದ್ದ ಬಗ್ಗೆ ಗನಕ್ಕಿದೆ. ನಿಗದಿತ ಅವಧಿಯಲ್ಲಿ
ವಿಳಂಬವಾಗಿರುವ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳವ
ಜೊತೆಗೆ ಸಾರ್ವಜನಿಕರಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಮೂಲ ಸವಲತ್ತುಗಳನ್ನು ಒದಗಿಸಲು ಬದ್ಧನಾಗಿದ್ದೇನೆ. ಇದಕ್ಕೆ ಆಡಳಿತ ಮಂಡಳಿಯವರು ಸಹಕಾರ ನೀಡಿದಾಗ ಮಾತ್ರ ಎಲ್ಲವೂ ಸರಿದೂಗಿಸಲು ಸಾಧ್ಯವೆಂದು ಮನವಿ ಮಾಡಿದರು.
ಪುರಸಭೆ ವ್ಯಾಪ್ತಿಯಲ್ಲಿರುವ ಬಡಾವಣೆಗಳಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕು. ವಾರ್ಡ್‍ವಾರು ರಸ್ತೆ,ಚರಂಡಿ, ವಿದ್ಯುತ್, ಜಂಗಲ್ ಕಟಿಂಗ್ ಸೇರಿ ಮೂಲ ಸವಲತ್ತುಗಳನ್ನು ಮಾಡಿಕೊಡಲು ಕ್ರಿಯಾಯೋಜನೆ ರಚಿಸಬೇಕು. ಕೆಲ ಸಿಬ್ಬಂಧಿಗಳು ಸದಸ್ಯರ ಮಾತಿಗೆ ಕಿಮ್ಮತ್ತು ಕೊಡುವುದಿಲ್ಲ. ಅಂಥವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.
ಪುರಸಭೆ ಉಪಾದ್ಯಕ್ಷ ಮೊಹ್ಮದ್ ರಫಿ ಸೇರಿ ಎಲ್ಲಾ ಸದಸ್ಯರು
ಹಾಗೂ ಸಿಬ್ಬಂಧಿಗಳು ಸಭೆಯಲ್ಲಿ ಇದ್ದರು.

