ಕೃಷಿ ಕಾಯ್ದೆಗಳು ರೈತ ವಿರೋಧಿಗಳಾಗಿವೆ-ಸಿಂಗ್ವಿ
ವರದಿ-ಡಿ.ಜಿ.ಶಿವು.ಗೆಜ್ಜಲಗಟ್ಟಾ
ಹಟ್ಟಿ ಚಿನ್ನದಗಣಿ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿದ್ದು, ಮುಂದಿನ ದಿನಗಳಲ್ಲಿ ರೈತರ ಮೇಲೆ ಇವುಗಳ ಪರಿಣಾಮ ಬೀರಲಿದೆ. ಈ ಕಾಯ್ದೆಗಳನ್ನು ಕೇಂದ್ರ ಸರಕಾರ ವಾಪಾಸ್ಸು ಪಡೆಯಬೇಕೆಂದು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಸೂಕ್ತವಾಗಿದೆ ಎಂದು ಟಿಯುಸಿಐ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ ಸಿಂಗ್ವಿ ಹೇಳಿದರು.
ಪಟ್ಟಣದ ಪೈಭವನದಲ್ಲಿ ಹಮ್ಮಿಕೊಂಡಿದ್ದ ಟಿಯುಸಿ ಸಂಘಟನೆಯ ಕಾರ್ಯಕರ್ತರ ಸಭೆಯಲ್ಲಿ ಭಾನುವಾರ ಮಧ್ಯಾಹ್ನ ಮಾತನಾಡಿದರು. ಕೇಂದ್ರ ಸರಕಾರ ಕೃಷಿ ಕಾಯ್ದೆಗೆ ತಿದ್ದುಪಡಿತಂದು ಹೊಸದಾಗಿ ಮೂರು ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ಈ ಮೂರು ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಪ್ರಸ್ತುತ್ ದಿನಮಾನದಲ್ಲಿ ಕಾಯ್ದೆಗಳ ಪರಿಣಾಮ ಕಾಣದಿದ್ದರೂ ಮುಂದಿನ ದಿನಮಾನಗಳಲ್ಲಿ ರೈತರು ತಾವು ಬೆಳದ ಬೆಳೆಗಳ ಮೇಲೆ ನಿಯಂತ್ರಣವನ್ನೆ ಕಳೆದುಕೊಳ್ಳುವ ಅಪಾಯವಿದೆ ಎಂದರು.
ಟಿಯುಸಿಐ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ, ಟಿಯುಸಿಐ ಜಿಲ್ಲಾಧ್ಯಕ್ಷ ಜಿ. ಅಮರೇಶ, ಹಟ್‍ಟಿ ಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಅಮೀರಅಲಿ, ಡಿ.ಕೆ.ಲಿಂಗಸುಗೂರು, ಮಹಿಬೂಬ್ ಬೈಚ್‍ಬಾಳ್, ಗುಡದಪ್ಪ ಭಂಡಾರಿ, ಶೌಕತಅಲಿ, ಸೇರಿದಂತೆ ಇತರರು ಇದರು.

