ಪಾಲಕರು ತಪ್ಪದೆ ಮಕ್ಕಳಿಗೆ ಪೊಲಿಯೋ ಹಾಕಿಸಬೇಕು-ಡಾ.ಸುರೇಖಾ
ವರದಿ-ಡಿ.ಜಿ.ಶಿವು.ಗೆಜ್ಜಲಗಟ್ಟಾ
ಹಟ್ಟಿ ಚಿನ್ನದಗಣಿ : ಪಾಲಕರು ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪಲ್ಸ್ ಪೊಲಿಯೋ ಲಸಿಕೆ ಹಾಕಿಸಬೇಕು ಎಂದು ಗೆಜ್ಜಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುರೇಖಾ ಹೇಳಿದರು.
ಸಮೀಪದ ವೀರಾಪೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕುವದರಿಂದ ಅಂಗವಿಕಲತೆಯನ್ನು ದೂರ ಮಾಡಬಹುದು. ಪೊಲಿಯೋ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಪಣತೊಟ್ಟು ನಿಂತಿದೆ. ಗೆಜ್ಜಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತೀಯ ಬರುವ ಹಳ್ಳಿಗಳಿಗೆ ತೆರಳಿ ಪಲ್ಸ ಪೊಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಮುಂದಾಗಿದ್ದೆವೆ. ಜೀವ ರಕ್ಷಕ ಎರಡು ಹನಿಗಳಿಂದ ಮಕ್ಕಳನ್ನು ಪೋಲಿಯೋದಿಂದ ರಕ್ಷಿಸೋಣ ಆಮೂಲಕ ಶಸಕ್ತ ಭಾರತ ನಿರ್ಮಾಣ ಸಂಕಲ್ಪ ನಿಮ್ಮದಾಗಲಿ ಎಂದರು.
ಈ ವೇಳೆ ಅಂಗನವಾಡಿ ಶಿಕ್ಷಕಿ ಶಶಿಕಲಾ ವೀರಾಪೂರು, ಆಶಾ ಕಾರ್ಯಕರ್ತೆ ಶಿವಮ್ಮ ವೀರಾಪೂರು, ಸೇರಿದಂತೆ ಇದ್ದರು.

