ಅವಿಭಾಗೀಕೃತ

ಬೆಂಡೋಣಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಲಿಂಗಸುಗೂರು : ತಾಲೂಕಿನ ಬೆಂಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಒಂದು ನಿಮಿಷದ ಕಾರ್ಯಕ್ರಮಗಳಾದ ಬಲೂನ್ ನಲ್ಲಿ ಗಾಳಿ ಹಾಕಿ ಪ್ಲಾಸ್ಟಿಕ್ ಲೋಟವನ್ನು ಎತ್ತುವುದು, ಸ್ಟ್ರಾ ಪೈಪಿನಿಂದ ಫೋಮ ಸೀಟಿನ ತುಕಡಿಗಳನ್ನು ಎತ್ತುವುದು, ಹಣೆಯ ಮೇಲೆ ಇಟ್ಟಿರುವ ಬಿಸ್ಕೆಟ್ಟನ್ನು ಮುಖದ ಹಾವಭಾವದಿಂದ ಕೈಯನ್ನು ಮುಟ್ಟದೆ ತಿನ್ನುವುದು, ಮ್ಯೂಸಿಕಲ್ ಚೇರ್ ಹಾಗೂ ಇನ್ನಿತರ ಚಟುವಟಿಕೆಗಳನ್ನು ಮಕ್ಕಳಿಗಾಗಿ ಮಾಡಿಸಲಾಯಿತು.

ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಶಾಲಾ ಮಂತ್ರಿಮಂಡಲದ ಸರ್ವ ಸದಸ್ಯರನ್ನು ಅಧ್ಯಕ್ಷ ಹಾಗೂ ಅತಿಥಿಗಳನ್ನಾಗಿ ಮಾಡಿ ವಿದ್ಯಾರ್ಥಿ ಮಕ್ಕಳೇ ಕೇಕ ಕತ್ತರಿಸುವುದರ ಮೂಲಕ ಮಕ್ಕಳ ದಿನಾಚರಣೆಗೆ ಮೆರಗು ನೀಡಲಾಯಿತು.

ಶಿಕ್ಷಕರಾದ ಚಂದ್ರು, ಶಿವಪ್ಪ, ಸುನಿತಾ, ಅಮರೇಶ ರವರು ಮಕ್ಕಳಿಗೆ ಸಿಹಿಯನ್ನು ತಿನಿಸಿದರು.

ಇಂದಿನ ಮಕ್ಕಳೇ ನಾಳಿನ ಸತ್ಪ್ರಜೆಗಳಾಗಲು ಪ್ರತಿನಿತ್ಯ ಶಾಲೆಗೆ ಹಾಜರಾಗಿ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ಪಡೆದು ನೈತಿಕ ಮೌಲ್ಯಗಳೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿಜ್ಞಾನ ಶಿಕ್ಷಕರಾದ ಚಂದ್ರುರವರು ತಿಳಿಸಿದರು. ಮಕ್ಕಳು ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಮಕ್ಕಳ ದಿನಾಚರಣೆಯಲ್ಲಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *

error: Content is protected !!