ಕೋವಿಡ್ ಜಾಗೃತಿ : ಹಳ್ಳಿಗಳಲ್ಲಿ ತಹಸೀಲ್ದಾರ ಪಾಟೀಲ್ ಗಸ್ತು
ಲಿಂಗಸುಗೂರು : ಕೋವಿಡ್ ಸಾಂಕ್ರಾಮಿಕ ಸೊಂಕು ತಡೆಗೆ ಈಗಾಗಲೇ ಸರಕಾರ ಕೈಗೊಂಡಿರುವ ಕ್ರಮಗಳ ಹಾಗೂ ಜನರು ಇದರಿಂದ ತಪ್ಪಿಸಿಕೊಳ್ಳಲು ಇರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ತಾಲೂಕಿನ ಹಳ್ಳಿಗಳಲ್ಲಿ ತಹಸೀಲ್ದಾರ್ ಚಾಮರಾಜ ಪಾಟೀಲ್ ಮನೆ-ಮನೆಗೆ ಗಸ್ತು ತಿರುಗಿದರು.
ತಾಲೂಕಿನ ಈಚನಾಳ ಪಂಚಾಯಿತಿ ಹಾಗೂ ಕಾಳಾಪೂರ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆ-ಮನೆಗೆ ಭೇಟಿ ನೀಡಿದ ತಹಸೀಲ್ದಾರ್‍ರ ನೇತೃತ್ವದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತಂಡವು ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮನವಿ ಮಾಡಿದರು. ವಿನಾಕಾರಣ ಮನೆಯಿಂದ ಆಚೆ ಬಾರದೇ ಕೊರೊನಾವನ್ನು ನಿಯಂತ್ರಣಕ್ಕೆ ತರಬೇಕು.
ಕಡ್ಡಾಯವಾಗಿ ಮಾಸ್ಕ್‍ಗಳನ್ನು ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ತಹಸೀಲ್ದಾರ್ ಪಾಟೀಲ್ ಕರೆ ನೀಡಿದರು.
ಕಾಳಾಪೂರ ಗ್ರಾ.ಪಂ. ಅದ್ಯಕ್ಷ ವಿಜಯಕುಮಾರ ಹೊಸಗೌಡ್ರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿ ಪ್ರತಿನಿಧಿಗಳು ಹಾಗೂ ಕೊವಿಡ್ ವಾರಿಯರ್ಸ್ ಜಾಗೃತಿ ಜಾಥಾದಲ್ಲಿ ಇದ್ದರು.

