ರಾಯಚೂರು

ಲಿಂಗಸುಗೂರು : ಲಾಕ್‍ಡೌನ್ ಅವಧಿಯಲ್ಲಿ ಆಹಾರ ಪೊಟ್ಟಣಗಳ ವಿತರಣೆ

ಲಿಂಗಸುಗೂರು : ಕೆ.ಶಿವನಗೌಡ ನಾಯಕ ಅಭಿಮಾನಿಗಳ ಬಳಗ ಹಾಗೂ ಕುಮಾರ ರಿಯಲ್ ಎಸ್ಟೇಟ್ ಉದ್ಯಮಿ ಇವರ ಸಹಯೋಗದಲ್ಲಿ ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಪಟ್ಟಣದಲ್ಲಿ ಹಸಿದವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಕಾರ್ಯಕ್ಕೆ ಗುರುವಾರ ಪತ್ರಕರ್ತರಿಂದ ಚಾಲನೆ ನೀಡಲಾಯಿತು.


ಗ್ರಾಮೀಣ ಪ್ರದೇಶದಿಂದ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರು ಊಟ, ಉಪಹಾರಕ್ಕೆ ಪರದಾಡುವ ಪರಿಸ್ಥಿತಿ ಲಾಕ್‍ಡೌನ್ ಅವಧಿಯಲ್ಲಿ ನಡೆಯುತ್ತದೆ. ಯಾರೂ ಅನ್ನಾಹಾರದಿಂದ ವಂಚಿತ ಆಗಬಾರದು ಎನ್ನುವ ಉದ್ದೇಶದಿಂದ ನಾವುಗಳು ಹಸಿದ ಹೊಟ್ಟೆಗೆ ಅನ್ನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಲಾಕ್‍ಡೌನ್ ಅವಧಿ ಮುಗಿಯುವವರೆಗೂ ನಮ್ಮ ಸೇವೆ ನಿರಂತರವಾಗಿ ನಡೆಯುತ್ತದೆ. ಪ್ರತಿದಿನ 500 ಜನರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುವ ಕಾರ್ಯಕ್ರಮ ನಮ್ಮದಾಗಿದೆ ಎಂದು ನಿತಿನ್ ಡೆವೆಲಪರ್ಸ್‍ನ ಕುಮಾರ ಚಿಂಚೊಳ್ಳಿ ತಿಳಿಸಿದರು.


ಪತ್ರಕರ್ತರ ಸಂಘದ ಅದ್ಯಕ್ಷ ಶಿವರಾಜ ಕೆಂಭಾವಿ, ಪತ್ರಕರ್ತರಾದ ರವಿಕುಮಾರ, ಹನುಮಂತ ಕನ್ನಾಳ, ಬಸಲಿಂಗಪ್ಪ ಭಜಂತ್ರಿ, ಎಸ್‍ಎಂ ಶಾಲಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!