ಲಿಂಗಸುಗೂರು : ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ
ಲಿಂಗಸುಗೂರು : ಶೇ.75ಕ್ಕಿಂತ ಹೆಚ್ಚಿನ ಪ್ರಮಾಣದ ವಿಕಲಚೇತನರಾಗಿರುವ ಫಲಾನುಭವಿಗಳಿಗೆ ಶುಕ್ರವಾರ ಸ್ಥಳೀಯ ತಾಲೂಕು ಪಂಚಾಯತ್ ಆವರಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಿದರು.
ತಾಲೂಕಿನ 29 ಪಂಚಾಯಿತಿಗಳ ಪೈಕಿ ಎಲ್ಲಾ ಪಂಚಾಯಿತಿಗಳಿಗೆ ತಲಾ ಒಂದು, ದೊಡ್ಡ ಪಂಚಾಯಿತಿಗಳಿಗೆ ಎರಡು ಎಂದು ನಿಗದಿಪಡಿಸಿ ಒಟ್ಟು 35 ಜನ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಗ್ರಾಮ ಪಂಚಾಯಿತಿಯ 14ನೇ ಹಣಕಾಸು ಯೋಜನೆಯಡಿ 2019-20ನೇ ಸಾಲಿನಲ್ಲಿ ವಿಕಲಚೇತನ ಕಲ್ಯಾಣಕ್ಕಾಗಿ ಮೀಸಲಾಗಿಟ್ಟ ಶೇ.5ರಷ್ಟು ಅನುದಾನದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ. ಬರುವ ದಿನಗಳಲ್ಲಿ ಅರ್ಹರಿಗೆ ಆಧ್ಯತೆ ಮೇರೆಗೆ ಬರುವ ಅನುದಾನದಲ್ಲಿ ಯಂತ್ರಚಾಲಿತ ವಾಹನಗಳ ವ್ಯವಸ್ಥೆ ಮಾಡುವುದಾಗಿ ಶಾಸಕರು ಹೇಳಿದರು.
ತಾ.ಪಂ. ಅದ್ಯಕ್ಷೆ ಶ್ವೇತಾ ಪಾಟೀಲ್, ಉಪಾದ್ಯಕ್ಷೆ ಯಲ್ಲಮ್ಮ ಭೋವಿ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ತಾ.ಪಂ. ಸದಸ್ಯ ವಾಹಿದ್ ಖಾದ್ರಿ, ಪುರಸಭೆ ಉಪಾದ್ಯಕ್ಷ ಮೊಹ್ಮದ್ ರಫಿ, ಸದಸ್ಯ ಅಬ್ದುಲ್‍ರೌಫ್ ಗ್ಯಾರಂಟಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ, ಮುಖಂಡರಾದ ಪಾಮಯ್ಯ ಮುರಾರಿ, ಪರಶುರಾಮ ನಗನೂರು ಸೇರಿ ವಿಕಲ ಚೇತನ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

