ರಾಯಚೂರು

ಮೂಲ ಸೌಕರ್ಯಕ್ಕೆ ಆಗ್ರಹ : ಸ್ಥಳಕ್ಕೆ ಮುಖ್ಯಾಧಿಕಾರಿ ಭೇಟಿ, ಪರಿಶೀಲನೆ

ಲಿಂಗಸುಗೂರು : ಪುರಸಭೆ ವ್ಯಾಪ್ತಿಯ 7ನೇ ವಾರ್ಡ್‍ನಲ್ಲಿ ಕುಡಿಯುವ ನೀರಿ, ರಸ್ತೆ, ಚರಂಡಿ, ವಿದ್ಯುತ್ ಸೇರಿ ಮೂಲ ಸವಲತ್ತುಗಳನ್ನು ಒದಗಿಸಬೇಕೆಂದು ವಾರ್ಡ್ ನಿವಾಸಿಗಳು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕರಿ ನರಸಪ್ಪ ತಶೀಲ್ದಾರ್ ಸಮಸ್ಯೆಗಳನ್ನು ಆಲಿಸಿ ಶೀಘ್ರ ಈಡೇರಿಸುವ ಭರವಸೆ ನೀಡಿದರು.


ಸ್ಥಳೀಯ ಕಲಬುರಗಿ ರಸ್ತೆಯಲ್ಲಿನ ಜನತಾ ಕಾಲೋನಿ ಏರಿಯಾದಲ್ಲಿ ಕಳೆದ ನಾಲ್ಕು ದಶಕಗಳ ಹಿಂದೆ ಬಡಾವಣೆಯನ್ನು ಮಾಡಲಾಗಿತ್ತು. ಅಂದಿನಿಂದ ಇವತ್ತಿಗೂ ಸಮಸ್ಯೆಗಳು ಇಲ್ಲಿ ರಾರಾಜಿಸುತ್ತಲೇ ಇವೆ. ಪ್ರತಿಷ್ಠಿತರು ವಾಸಿಸುವ ಬಡಾವಣೆಗಳಿಗೆ ಪುರಸಭೆಯು ಅನುಕೂಲ ಕಲ್ಪಿಸುತ್ತಿದೆ. ಆದರೆ, ಬಡವರಿಗೆ ಮಾತ್ರ ಯಾವುದೇ ಸವಲತ್ತುಗಳನ್ನು ನೀಡದೇ ತಾರತಮ್ಯ ಮಾಡುತ್ತಿದೆ ಎಂದು ನಿವಾಸಿಗಳು ದೂರಿದರು. ವಾರ್ಡ್‍ನಲ್ಲಿ ಸುತ್ತಾಡಿದ ಮುಖ್ಯಾಧಿಕಾರಿ ನರಸಪ್ಪ ಸಮಸ್ಯೆಗಳನ್ನು ಈಡೇರಿಸುವ ಭರವಸೆ ನೀಡಿದರು.


ಪ್ರಭುಲಿಂಗ ಮೇಗಳಮನಿ, ಅಕ್ರಂಪಾಷಾ, ಮಹಾಂತೇಶ, ಅನ್ವರಸಾಬ, ರುಸ್ತುಂಖಾನ್, ಸುರೇಶ ಮೇಟಿ, ಚೇತನ್, ಮೌನೇಶ, ವಿಜಯ ಪಾಟೀಲ್, ಅಮೀನ್ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!