ರಾಯಚೂರು

ಸಹಸ್ರಾರು ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಭಾಗಿ ವಜ್ಜಲ್ ಕುಟುಂಬದಲ್ಲಿ ಸಿದ್ಧರಾಮೇಶ್ವರನ ಬರ್ತಡೇ ಸಂಭ್ರಮ

ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಕುಟುಂಬದಲ್ಲಿ ಬರ್ತಡೇ ಸಂಭ್ರಮ ಜರುಗಿತು. ಸಹೋದರ ಕರಿಯಪ್ಪ ವಜ್ಜಲ್‍ರ ಸುಪುತ್ರ ಸಿದ್ಧರಾಮೇಶ್ವರನ 16ನೇ ವರ್ಷದ ಹುಟ್ಟುಹಬ್ಬದ ಸಮಾರಂಭವನ್ನು ಸ್ಥಳೀಯ ವಜ್ಜಲ್‍ರ ನಿವಾಸ ನಾಗ ನಿಲಯದಲ್ಲಿ ಮಂಗಳವಾರ ರಾತ್ರಿ ಅದ್ಧೂರಿಯಾಗಿ ಆಯೋಜನೆ ಮಾಡಲಾಗಿತ್ತು.ಹುಟ್ಟುಹಬ್ಬದ ಸಮಾರಂಭಕ್ಕೆ ಪಕ್ಷಾತೀತವಾಗಿ ಮುಖಂಡರುಗಳು, ವೈದ್ಯರು, ಪತ್ರಕರ್ತರು ಭಾಗವಹಸಿ ಬರ್ತಡೇ ಬಾಯ್‍ಗೆ ಶುಭ ಹಾರೈಸಿದರು.

ಕ್ಷೇತ್ರದ ಜನರ ಆಶೀರ್ವಾದ ಸದಾ ವಜ್ಜಲ್ ಕುಟುಂಬದ ಮೇಲೆ ಹೀಗೆಯೇ ಇರಲಿ. ವಜ್ಜಲ್ ಕುಟುಂಬವೂ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಬರುವ ದಿನಗಳಲ್ಲಿಯೂ ಜನಸೇವೆಯಲ್ಲಿಯೇ ನಿರತವಾಗಿರುತ್ತದೆ ಎಂದು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಮಾತನಾಡಿದರು.

ಕೆಪಿಸಿಸಿ ಸದಸ್ಯ ಶರಣಗೌಡ ಬಯ್ಯಾಪೂರ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ, ಮಾಜಿ ಪುರಸಭೆ ಅದ್ಯಕ್ಷ ಖಾದರಬಾಷಾ, ಮುಖಂಡರಾದ ರಾಜಾ ಶ್ರೀನಿವಾಸನಾಯಕ, ಬಾಬಣ್ಣ ಅನ್ವರಿ ಸೇರಿ ಸಾವಿರಾರು ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ವಜ್ಜಲ್ ಕುಟುಂಬದ ನಾಗಪ್ಪ ವಜ್ಜಲ್, ಕರಿಯಪ್ಪ ವಜ್ಜಲ್ ಸೇರಿ ಕುಟುಂಬದ ಸದಸ್ಯರು ಬರ್ತಡೇ
ಬಾಯ್ ಸಿದ್ಧರಾಮೇಶ್ವರನಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *

error: Content is protected !!