ಯರಡೋಣ ಸರಕಾರಿ ಪ್ರೌಢಶಾಲೆ : ಎಸ್.ಡಿ.ಎಂ.ಸಿ. ರಚನೆ
ಲಿಂಗಸುಗೂರು : ತಾಲೂಕಿನ ಯರಡೋಣ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. (ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ)ಯನ್ನು ರಚಿಸಲಾಗಿದ್ದು, ಗುಂಡಪ್ಪ ಗವಿ ಇವರು ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಎಂ.ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಶಿಕ್ಷಣ ಇಲಾಖೆಯ
ನಿಯಮಾನುಸಾರ ಶಾಲೆಯಲ್ಲಿ ಓದುತ್ತಿರುವ ಯರಡೋಣ, ಹೊನ್ನಹಳ್ಳಿ,ದೇವರಭೂಪೂರ, ಮೇದಿನಾಪೂರ,ಪರಾಂಪೂರ ಗ್ರಾಮಗಳ ಮಕ್ಕಳ ಪಾಲಕರ ಸಭೆಯನ್ನು ಕರೆದು, ಸರ್ವರ ಸಮ್ಮತದಿಂದ ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಸಮಿತಿಯ
ಅದ್ಯಕ್ಷರಾಗಿ ಗುಂಡಪ್ಪ ಗವಿ, ಸದಸ್ಯರುಗಳಾಗಿ ವೆಂಕಟೇಶ,
ರಾಜಮಹ್ಮದ್, ಆದಪ್ಪ, ಬಸವರಾಜ, ಶಿವಲೀಲಾ, ರೇಣುಕಾ, ನೀಲಮ್ಮ, ಚಂದಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

