ಲಿಂಗಸುಗೂರು : ಲಾಕ್‍ಡೌನ್ ಸಮಯ ಮೀರಿ ಓಪನ್ ಇದ್ದ ಅಂಗಡಿ ಸೀಜ್..!
ಲಿಂಗಸುಗೂರು : ಲಾಕ್‍ಡೌನ್‍ನ ನಿಗದಿತ ಸಮಯ ಮೀರಿದ್ದರೂ ಚಾಲೂ ಇದ್ದ ಅಂಗಡಿಗಳನ್ನು ತಹಸೀಲ್ದಾರ್ ನಾಗಪ್ರಶಾಂತ ಯಜಮಾನ್ ನೇತೃತ್ವದಲ್ಲಿ ಸೀಜ್ ಮಾಡಲಾಯಿತು.
ಆಜಾದ್‍ನಗರ ಬಡಾವಣೆಯಲ್ಲಿ ಕಿರಾಣಿ ಅಂಗಡಿಯೊಂದು ಸುಮಾರು 11 ಗಂಟೆಯಾದರೂ ತೆರೆದಿತ್ತು. ಸಮಯ ಮೀರಿದ್ದರೂ ಅಂಗಡಿ ತೆರೆದಿರುವ ಬಗ್ಗೆ ಸ್ಥಳೀಯರು ತಹಸೀಲ್ದಾರ್‍ರಿಗೆ ದೂರವಾಣಿ ಕರೆ ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ತಹಸೀಲ್ದಾರ್ ಸಿಬ್ಬಂಧಿಯೊಂದಿಗೆ ಸ್ಥಳಕ್ಕೆ ಆಗಮಿಸಿ ತೆರೆದಿದ್ದ ಅಂಗಡಿಯನ್ನು ಬಂದ್
ಮಾಡುವ ಜೊತೆಗೆ ಸೀಜ್ ಮಾಡಿದರು.
ಕೆಲವು ಏರಿಯಾಗಳಲ್ಲಿ ಅರ್ಧ ಶೆಟರ್ ತೆರೆದು ವ್ಯಾಪಾರ
ಮಾಡುತ್ತಿರುವ ಬಗ್ಗೆ ಮಾಹಿತಿಗಳಿದ್ದು, ಈ ಬಗ್ಗೆ ಅಧಿಕಾರಿಗಳು ವಿವಿಧ ವಾರ್ಡ್‍ಗಳಲ್ಲಿ ಗಸ್ತು ಹಾಕುವ ಮೂಲಕ ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿವೆ.

