ರಾಯಚೂರು

ಕರ್ತವ್ಯದಿಂದ ಮನೆಗೆ ಮರಳುವಾಗ ಪೋಲಿಸರಿಂದ ಹಲ್ಲೆ : ಕ್ರಮಕ್ಕೆ ಒತ್ತಾಯ


ಲಿಂಗಸುಗೂರು : ಕೋವಿಡ್-19ಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ನೌಕರರು ಹಾಗೂ ಗ್ರಾಮ ಲೆಕ್ಕಾಧಿಕಾರಗಳು ಲಾಕ್‍ಡೌನ್ ಸಮಯದಲ್ಲಿ ಕರ್ತವ್ಯ ಮುಗಿಸಿಕೊಂಡು ಮನೆಗೆ ಮರಳುವಾಗ ಪೋಲಿಸರು ಹಲ್ಲೆ
ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳಸಂಘಟನೆಯ ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು.


ಶಿರಸ್ತೆದಾರ ಬಸವರಾಜರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು,ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಏಪ್ರಿಲ್ 26 ರಂದು ಗ್ರಾಮಲೆಕ್ಕಾಧಿಕಾರಿಗಳಾದ ಸಂದೀಪ್ ರಾಮಣ್ಣವರ್ ಹಾಗೂ ಬಸವರಾಜ ಮಾದರ್ ಎನ್ನುವವರು ರಾತ್ರಿಹೊತ್ತು ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುವಾಗ ರಸ್ತೆ ಮಧ್ಯದ ಹೊಟೆಲ್ ಒಂದರಲ್ಲಿ ಊಟವನ್ನು ಪಾರ್ಸೆಲ್
ತೆಗೆದುಕೊಳ್ಳಲು ನಿಂತಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪಿಎಸ್‍ಐ ವಿನೋದ್‍ಕುಮಾರ ಸೇರಿ ಸಿಬ್ಬಂಧಿಗಳು ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಮೈಯಲ್ಲಿ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿರುತ್ತಾರೆ.


ಸರಕಾರಿ ಕರ್ತವ್ಯದ ಗುರುತಿನ ಕಾರ್ಡ್ ತೋರಿಸಿದರೂ ಕೇಳದ ಪೋಲಿಸರು ಅಮಾನುಷವಾಗಿ ವರ್ತನೆ ಮಾಡಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳೂ ಕೆಲಸ ನಿರ್ವಹಿಸುತ್ತಿರುವ ಗ್ರಾಮ
ಲೆಕ್ಕಾಧಿಕಾರಿಗಳಿಗೆ ಪೋಲಿಸರು ಮನಸೋಇಚ್ಛೆ ಹೊಡೆದಿರುವುದು ಖಂಡನೀಯವಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಇಂಥಹ ಘಟನೆಗಳು ಮರುಕಳಿಸುತ್ತಲೇ ಇವೆ. ಪರಿಣಮ ಕಂದಾಯ ಇಲಾಖೆ ಸಿಬ್ಬಂಧಿಗಳು ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ಕೂಡಲೇ ಇಂಥಹ
ಘಟನೆಗಳು ಮರುಕಳಿಸದಂತೆ ಕ್ರಮಕ್ಕೆ ಮುಂದಾಗಬೇಕು.
ನಮ್ಮ ತಾಲೂಕು ಜಿಲ್ಲೆಯಲ್ಲಿಯೂ ಕಂದಾಯ ಇಲಾಖೆ
ಸಿಬ್ಬಂಧಿಗಳು ಕರ್ತವ್ಯ ನಿರ್ವಹಿಸಲು ಪೋಲಿಸ್ ಇಲಾಖೆಯಿಂದ ಯಾವುದೇ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಸಂಘಟನೆ ಅದ್ಯಕ್ಷ ರಮೇಶ ರಾಠೋಡ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕ್ಯಾತನಾಳ, ಖಜಾಂಚಿ ಬಸವರಾಜ, ರಾಮಣ್ಣ, ಇಮಾಮಸಾಬ,ಶಾರದಾಬಾಯಿ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!