ಆಡಳಿತ ಮಂಡಳಿ ಮಾತಿಗೆ ಕಿಮ್ಮತ್ತು ನೀಡದ ಮುಖ್ಯಾಧಿಕಾರಿ : ಅದ್ಯಕ್ಷರ ಬೇಸರ
ಲಿಂಗಸುಗೂರು : ಅಭಿವೃದ್ಧಿ ವಿಷಯವಾಗಿ ಅದ್ಯಕ್ಷ-ಉಪಾದ್ಯಕ್ಷ,ಸದಸ್ಯರು ಸೇರಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಪುರಸಭೆ ಮುಖ್ಯಾಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಖುದ್ದು ಅದ್ಯಕ್ಷೆ ಗದ್ದೆಮ್ಮಾ ಭೋವಿಯವರು ಬೇಸರ ವ್ಯಕ್ತಪಡಿಸಿದರು.
ಈ ಬಗ್ಗೆ ಪುರಸಭೆಯ ತಮ್ಮ ಕಚೇರಿಯಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ 23 ವಾರ್ಡ್‍ಗಳಲ್ಲಿ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ಮುಖ್ಯಾಧಿಕಾರಿಗಳು ಆಡಳಿತ ಮಂಡಳಿಗೆ ಸಾಥ್ ನೀಡುತ್ತಿಲ್ಲ. ಕೇಳಿದರೆ ದಿನಕ್ಕೊಂದು ನೆಪ ಹೇಳುತ್ತಲೇ ಸಾಗಹಾಕುತ್ತಿದ್ದಾರೆ. ಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ.
ನಮ್ಮನ್ನು ಆಯ್ಕೆ ಮಾಡಿದ ಜನ ಉಗಿಯುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಹಲವು ವಾರ್ಡ್‍ಗಳಲ್ಲಿ ಸಮರ್ಪಕವಾಗಿಲ್ಲ ಎನ್ನುವ ದೂರುಗಳಿವೆ. ಇನ್ನು ಕಚೇರಿಯಲ್ಲಿ ಖಾತಾನಕಲು,ಮೊಟೇಶನ್, ಕಟ್ಟಡ ಪರವಾನಿಗೆ ಸೇರಿ ಸಕಾಲದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ಅದ್ಯಕ್ಷರು
ಮುಖ್ಯಾಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಅಸಮಧಾನ
ವ್ಯಕ್ತಪಡಿಸಿದರು.
ಜೆಡಿಎಸ್ ಯುವ ಘಟಕದ ಅದ್ಯಕ್ಷ ಇಮ್ತೆಯಾಜ್ ಪಾಷಾ ಈ ಸಂದರ್ಭದಲ್ಲಿ ಇದ್ದರು.

