ಮಾಸ್ಕ್ ಇಲ್ಲದವರಿಗೆ ದಂಡ : ಬೆಳಗಿನಿಂದಲೇ ಫೀಲ್ಡಿಗಿಳಿದ ಡಿವೈಎಸ್‍ಪಿ
ಲಿಂಗಸುಗೂರು : ಕೊರೊನಾ ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಆದೇಶ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನಿಂದಲೇ ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು ಅವರ ನೇತೃತ್ವದಲ್ಲಿ ಪೋಲಿಸರು ಫೀಲ್ಡಿಗಿಳಿದು ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ ಸಾರ್ವಜನಿಕರಿಂದ ದಂಡ ವಸೂಲಿ ಮಾಡಿದರು.
ದ್ವಿಚಕ್ರ ವಾಹನಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುತ್ತಿರುವವರಿಂದ 100 ರೂಪಾಯಿ ದಂಡ ವಸೂಲಿ ಮಾಡಲಾಯಿತು. ನೂರಾರು ಜನ ಆದೇಶದ ಅರಿವಿಲ್ಲದಂತೆ ರಸ್ತೆಯಲ್ಲಿ ಓಡಾಡುತ್ತಿದ್ದರು. ಬಸ್ಟಾಂಡ್ ಸರ್ಕಲ್‍ನಲ್ಲಿ ಸಿಬ್ಬಂಧಿಗಳೊಂದಿಗೆ ತೈನಾಗಿದ್ದ ಡಿವೈಎಸ್‍ಪಿಯವರುವಾಹನ ಸವಾರರಿಂದ ದಂಡ ವಸೂಲಿ ಮಾಡಿ ಕಫ್ರ್ಯೂ ಬಗ್ಗೆ ಅರಿವು
ಮೂಡಿಸಿದರು.

