ಪುರಸಭೆಯಲ್ಲಿ ವಿಶೇಷ ಸಭೆ : ಲಿಂಗಸುಗೂರು ಸ್ವಚ್ಛತೆಗೆ ಆದ್ಯತೆ
ಲಿಂಗಸುಗೂರು : ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಸೋಮವಾರ ಪುರಸಭೆ ಅದ್ಯಕ್ಷೆ ಗದ್ದೆಮ್ಮ ಭೋವಿಯವರ ಅದ್ಯಕ್ಷತೆಯಲ್ಲಿ ಪಟ್ಟಣದ ಅಭಿವೃದ್ಧಿ ವಿಷಯವಾಗಿ ವಿಶೇಷ ಸಭೆ ಜರುಗಿತು.
2021-22ನೇ ಸಾಲಿನ ಎಸ್.ಎಫ್.ಸಿ. ಕ್ರಿಯಾ ಯೋಜನೆಯ ಮಂಜೂರಾತಿ, 2021-22ನೇ ಸಾಲಿನ 15ನೇ ಹಣಕಾಸು ಕ್ರಿಯಾ ಯೋಜನೆಯ ಮಂಜೂರಾತಿ, 2021-22ನೇ ಸಾಲಿನ ಶೇ.29, ಶೇ.7.25 ಮತ್ತು ಶೇ.5 ಅನುದಾನದ ಕ್ರಿಯಾ ಯೋಜನೆ ಮಂಜೂರಾತಿ ಚರ್ಚೆಯ ಜೊತೆಗೆ ಪುರಸಭೆಯ ನಾನಾ ವಾರ್ಡ್‍ಗಳಲ್ಲಿ ಶುಚಿತ್ವಕ್ಕೆ ಆಧ್ಯತೆ ನೀಡುವಂತೆ ಆಡಳಿತ ಮಂಡಳಿ ಪ್ರಭಾರಿ ಮುಖ್ಯಾಧಿಕಾರಿ ಪ್ರವೀಣ್‍ಕುಮಾರ್‍ರಿಗೆ ತಾಕೀತು ಮಾಡಿದರು.
ಕಳೆದ ಸಭೆಯಲ್ಲಿ ಎನ್‍ಎ ಆದ ಹೊಸ ಲೇಔಟ್‍ಗಳಿಗೆ ಎನ್‍ಓಸಿ ಪ್ರಮಾಣ ಪತ್ರ ನೀಡುವಂತೆ ಅನುಮೋದಿಸಲಾಗಿತ್ತು. ಇದುವರೆಗೂ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲವೆಂದು ಕೆಲ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಆಡಳಿತ ಮಂಡಳಿ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ನಿಯಮಾನುಸಾರ ಹೊಸ ಲೇಔಟ್‍ಗಳಲ್ಲಿ ಡ್ರೈನೇಜ್, ವಿದ್ಯುತ್, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಮೂಲ ಸೌಕರ್ಯ ಕಲ್ಪಿಸಿದ್ದರೆ ಅಂಥವುಗಳಿಗೆ ಪರವಾನಿಗೆ ಕೊಡುವುದಾಗಿ ಮುಖ್ಯಾಧಿಕಾರಿ ಪ್ರವೀಣ್‍ಕುಮಾರ ಹೇಳಿದರು.
ಪುರಸಭೆ ಉಪಾದ್ಯಕ್ಷ ಮಹ್ಮದ್ ರಫಿ, ಸ್ಥಾಯಿ ಸಮಿತಿ ಅದ್ಯಕ್ಷ ಪ್ರಮೋದ್‍ಕುಮಾರ ಸೇರಿ ಪುರಸಭೆ ಸದಸ್ಯರು ಹಾಗೂ ಸಿಬ್ಬಂಧಿಗಳು ಸಭೆಯಲ್ಲಿ ಇದ್ದರು.

