ರಾಯಚೂರು

ಮಳೆಗೆ ಹೊಂಡಗಳಾದ ರಸ್ತೆಗಳು : ಸಂಚಾರಕ್ಕೆ ತೊಂದರೆ

ಲಿಂಗಸುಗೂರು : ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಪ್ರಮುಖ ರಸ್ತೆಗಳು ಬಹುತೇಕ ಕಡೆಗಳಲ್ಲಿ ಹೊಂಡಗಳಾಗಿ ಮಾರ್ಪಟ್ಟ ದೃಶ್ಯಗಳು ಸಾಮಾನ್ಯವಾಗಿ ಕಾಣಿಸುತ್ತಿವೆ.


ಬಸ್ಟಾಂಡ್ ಮುಂಭಾಗದ ರಸ್ತೆ, ಪಶು ಆಸ್ಪತ್ರೆ ಮುಂಭಾಗ, ರಾಯಚೂರು ರಸ್ತೆ ಸೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಿರ್ವಹಣೆ ಕೊರತೆಯಿಂದ ತೆಗ್ಗುಗುಂಡಿಗಳು ಬಿದ್ದಿದ್ದು ಅವುಗಳಲ್ಲಿ ನೀರು ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.


ಅಲ್ಲಲ್ಲಿ ಚರಂಡಿಗಳಲ್ಲಿನ ಹೂಳಿನ ಪರಿಣಾಮ ರಸ್ತೆಗೆ ಕಲುಶಿತ ನೀರು ಹರಿಯುತ್ತಿದೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವ ಮೂಲಕ ವಾತಾವರಣ ಕಲುಶಿತಗೊಂಡಿದೆ. ಈ ಬಗ್ಗೆ ಕ್ರಮಕ್ಕೆ ಮುಂದಗಬೇಕಿರುವ ಪುರಸಭೆ ಆಡಳಿತ ಮಾತ್ರ ಯಾವುದಕ್ಕೂ ಸ್ಪಂಧಿಸದೇ ಇರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.


ಪಟ್ಟಣದ ಕೆಲ ರಸ್ತೆಗಳ ಪಕ್ಕದಲ್ಲಿಯೇ ಮೊಬೈಲ್ ಕೇಬಲ್ ಹಾಕಲು ತೋಡಲಾಗಿದ್ದ ಗುಂಡಿಗಳನ್ನು ಹಾಗೇಯೇ ಬಿಟ್ಟ ಪರಿಣಾಮ ಮಳೆಯ ನೀರಿಗೆ ಕೆಲವು ಕಡೆ ಡಾಂಬರ್ ರೋಡ್ ಕೊಚ್ಚಿಕೊಂಡು ಹೋಗಿದ್ದರೆ, ಮತ್ತೆ ಕೆಲವೆಡೆ ಗುಂಡಿಗಳಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ನಿಲ್ಲುವ ಮೂಲಕ ಅಪಾಯಕ್ಕೆ ಕಾದಿವೆ.


ಕೂಡಲೇ ಪುರಸಭೆ ಪಟ್ಟಣದ ವ್ಯಾಪ್ತಿಯ ರಸ್ತೆಗಳ ಮಧ್ಯ ನಿಂತ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡಲು ಹೂಳು ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆ ಮಧ್ಯದ ತೆಗ್ಗುಗುಂಡಿಗಳನ್ನು ಮುಚ್ಚಬೇಕು. ಸಾರ್ವಜನಿಕರಿಗೆ, ವಾಹನ ಸವಾರರಿಗೆ ದಾರಿಯಲ್ಲಿ ಸಂಚರಿಸಲು ಮುಕ್ತ ಅವಕಾಶ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಕರವೇ ಅದ್ಯಕ್ಷ ಜಿಲಾನಿಪಾಷಾ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!